ಸನ್ಮಾರ್ಗ ವಾರ್ತೆ
ಟೆಲ್ಅವೀವ್: ಫೈಝರ್-ಬಯೊಟೆಕ್ನಿಕ್ನ ಕೊರೋನ ವ್ಯಾಕ್ಸಿನ್ ಮೂರನೇ ಡೋಸ್ ನೀಡಲು ಇಸ್ರೇಲ್ ಸಜ್ಜಾಗಿದ್ದು ಆರುವತ್ತು ವರ್ಷ ದಾಟಿದವರಿಗೆ ಮೊದಲ ಘಟ್ಟದಲ್ಲಿ ವ್ಯಾಕ್ಸಿನ್ ನೀಡುವ ಕಾರ್ಯ ಆರಂಭಗೊಂಡಿದೆ. ಇವರು ಈ ಹಿಂದೆ ಎರಡು ಡೋಸ್ ವ್ಯಾಕ್ಸಿನ್ ಸ್ವೀಕರಿಸಿದ್ದಾರೆ. ಕೊರೋನ ವ್ಯಾಕ್ಸಿನ್ ಮೂರನೆ ಡೋಸ್ ನೀಡುವ ಮೊದಲ ದೇಶವಾಗಿ ಇಸ್ರೇಲ್ ಪರಿಗಣನೆ ಪಡೆದುಕೊಂಡಿತು. ಗುರುವಾರ ಅಧಿಕೃತ ಟಿವಿಯಲ್ಲಿ ಇಸ್ರೇಲ್ ಪ್ರಧಾನಿ ನಫ್ತಲಿ ಬೆನೆಟ್ ಈ ವಿಷಯವನ್ನು ಪ್ರಕಟಿಸಿದರು.
ಎರಡನೇ ಡೋಸ್ ಪಡೆದು ಐದು ತಿಂಗಳು ಕಳೆದವರಿಗೆ ಮೂರನೇ ಡೋಸ್ ನೀಡಲಾಗುತ್ತಿದೆ. ವ್ಯಾಕ್ಸಿನ್ಗಳು ಸುರಕ್ಷಿತ ಎಂಬ ಸತ್ಯವನ್ನು ಇದು ಬಹಿರಂಗಗೊಳಿಸುತ್ತಿದೆ. ಗಂಭೀರ ಅವಸ್ಥೆಯಲ್ಲಿದ್ದ ರೋಗಿಗಳನ್ನು ಸಾವಿನಿಂದ ವ್ಯಾಕ್ಸಿನ್ ಸಂರಕ್ಷಿಸುತ್ತದೆ ಎಂದು ಸಾಬೀತಾಗಿದೆ ಎಂಬುದಾಗಿ ಬೆನೆಟ್ ಹೇಳಿದರು. ಕಾಲಕಾಲಗಳಲ್ಲಿ ನವೀಕರಣಗೊಂಡ ಫ್ಲೂ ವ್ಯಾಕ್ಸಿನ್ನಂತೆ ಈ ಪರಿಸ್ಥಿತಿಯಿದ್ದು ಕೊರೋನ ವ್ಯಾಕ್ಸಿನ್ ಕೂಡ ಹೀಗೆಯೇ ಎಂದು ಅವರು ವಿವರಿಸಿದರು.
ಕಳೆದ ಡಿಸೆಂಬರ್, ಜನವರಿ, ಫೆಬ್ರುವರಿ ತಿಂಗಳಲ್ಲಿ ವೃದ್ಧರಿಗೆ ಕೊರೋನ ವ್ಯಾಕ್ಸಿನ್ ಸಂಪೂರ್ಣ ವಿತರಿಸಿಯಾಗಿತ್ತು. ಇಸ್ರೇಲಿನ 9.3 ದಶಲಕ್ಷ ಜನಸಂಖ್ಯೆಯಲ್ಲಿ ಶೇ.57ರಷ್ಟು ಜನರು ಈಗಾಗಲೇ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. ಇದೇ ವೇಳೆ ಫೆಲಸ್ತೀನಿಯರಿಗೆ ವ್ಯಾಕ್ಸಿನ್ ನೀಡದೆ ತಾರತಮ್ಯವೆಸಗಲಾಗಿದೆ ಎಂಬ ಆರೋಪವನ್ನು ಇಸ್ರೇಲ್ ಎದುರಿಸುತ್ತಿದೆ. ಮೂರನೇ ಅಲೆಯಿಂದ ಪಾರಾಗಲು ವೈರಸ್ನ ತೀವ್ರತೆ ಕಡಿಮೆ ಮಾಡಲು ಮೂರನೇ ಡೋಸ್ ವ್ಯಾಕ್ಸಿನ್ ತೆಗೆಯಬೇಕಾದ್ದು ಅಗತ್ಯವೆಂದು ವ್ಯಾಕ್ಸಿನ್ ನಿರ್ಮಿಸುವ ಕಂಪೆನಿಯಾದ ಫೈಝರ್ ಹೇಳಿತ್ತು.












