ಸನ್ಮಾರ್ಗ ವಾರ್ತೆ
ಪಾಟ್ನಾ: ಬಿಹಾರದಲ್ಲಿ ಕಾಂಗ್ರೆಸ್ ಸಖ್ಯಪಕ್ಷವಾದ ಆರ್ಜೆಡಿ ಮತ್ತು ಕಾಂಗ್ರೆಸ್ನ ಭಿನ್ನಮತವು ಹೊರಬಿದ್ದಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲುವುದಕ್ಕಾಗಿ ಸೀಟು ಬಿಟ್ಟುಕೊಡಬೇಕೇ ಎಂದು ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಪ್ರಶ್ನಿಸಿದ್ದಾರೆ. ಬಿಹಾರದ ಉಸ್ತುವಾರಿ ಹೊಂದಿರುವ ಕಾಂಗ್ರೆಸ್ನ ಭಕ್ತಚರಣ್ ದಾಸ್ರನ್ನು ಲಾಲು ವಿವೇಕವಿಲ್ಲದ ವ್ಯಕ್ತಿ ಎಂದು ಹೇಳಿದ್ದು ಕಾಂಗ್ರೆಸ್ನ ಮುನಿಸಿಗೆ ಕಾರಣವಾಗಿತ್ತು.
ಕಾಂಗ್ರೆಸ್ ಗೆಲ್ಲುವುದಿಲ್ಲ. ಸೋಲುವುದಕ್ಕಾಗಿ ಕಾಂಗ್ರೆಸ್ಗೆ ಸೀಟು ಬಿಟ್ಟು ಕೊಡಬೇಕೇ ಎಂದು ಪಾಟ್ನಾಕ್ಕೆ ಹೊರಡುವ ಮೊದಲು ಹೊಸದಿಲ್ಲಿಯಲ್ಲಿ ಲಾಲು ಮಾಧ್ಯಮದವರೊಂದಿಗೆ ಹೇಳಿದರು. ಅಕ್ಟೋಬರ್ 30ಕ್ಕೆ ಬಿಹಾರದ ಉಪಚುನಾವಣೆ ನಡೆಯಲಿದೆ. ಕುಶ್ವೇಶ್ವರ ತಾರಾಪುರದಲ್ಲಿ ನಡೆಯುವ ಉಪಚುನಾವಣೆಯ ಕುರಿತು ಲಾಲೂ ಹೀಗೆ ಹೇಳಿದ್ದಾರೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿತ್ತು. ಆದರೆ ಆರ್ಜೆಡಿ ಈ ಕ್ಷೇತ್ರವನ್ನು ಕಾಂಗ್ರೆಸ್ಗೆ ಕೊಡಲು ನಿರಾಕರಿಸಿತ್ತು. ಈಗ ಎರಡೂ ಸ್ಥಾನಗಳಲ್ಲಿ ಜೆಡಿಯು, ಆರ್ಜೆಡಿ, ಕಾಂಗ್ರೆಸ್ ಅಭ್ಯರ್ಥಿಗಳನ್ನು ನಿಲ್ಲಿಸಿವೆ.












