ಸನ್ಮಾರ್ಗ ವಾರ್ತೆ
ಲಕ್ನೊ: ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರ ಹತ್ಯೆ ಪ್ರಕರಣದಲ್ಲಿ ಬಂಧಿತನಾದ ಕೇಂದ್ರ ಸಚಿವ ಅಜಯ್ ಮಿಶ್ರಾರ ಮಗ ಆಶಿಷ್ ಮಿಶ್ರಾನನ್ನು ಆಸ್ಪತ್ರಗೆ ಸೇರಿಸಲಾಗಿದೆ. ಆರೋಪಿಗೆ ಡೆಂಗ್ಯೂ ಜ್ವರ ಬಾಧಿರುವುದಾಗಿ ಆಸ್ಪತ್ರೆಯಲ್ಲಿ ವೈದ್ಯರು ದೃಢೀಕರಿಸಿದ್ದಾರೆ.
ಆಸ್ಪತ್ರೆಯಲ್ಲಿ ಆತನ ರಕ್ತದ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸಲಾಗಿದೆ. ಫಲಿತಾಂಶ ಇನ್ನಷ್ಟೇ ಬರಬೇಕಾಗಿದೆ ಎಂದು ಲಖೀಂಪುರ ಚೀಫ್ ಮೆಡಿಕಲ್ ಆಫಿಸರ್ ಶೈಲೇಶ್ ಭಟ್ನಾಗರ್ ಹೇಳಿದರು.
ಶುಕ್ರವಾರ ಸ್ಥಳೀಯ ಕೋರ್ಟು ಆಶಿಷ್ ಮಿಶ್ರಾ ಮತ್ತು ಇತರ ಮೂವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಬಿಟ್ಟು ಕೊಡಲಾಗಿತ್ತು. ಆಶಿಷ್ ಮಿಶ್ರಾರ ಗೆಳೆಯ ಅಂಕಿತ್ ದಾಸ್, ಚಾಲಕ ಶೇರ್ಖೃ ಭಾರತಿ, ಲತೀಫ್ ಇತರ ಆರೋಪಿಗಳಾಗಿದ್ದಾರೆ. ಆರೋಪಿ ಅಂಕಿತ್ ದಾಸ್ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಅಖಿಲೇಶ್ ದಾಸ್ರ ನಿಕಟ ಸಂಬಂಧಿ ಆಗಿದ್ದಾನೆ.












