ಸನ್ಮಾರ್ಗ ವಾರ್ತೆ
ಕಾನ್ಪುರ: ಉತ್ತರ ಪ್ರದೇಶದಲ್ಲಿ ಮೊದಲ ಝೀಕಾ ವೈರಸ್ ಪ್ಎಕರಣವು ಕಾನ್ಪುರದಲ್ಲಿ ದೃಢವಾಗಿದೆ. ರೋಗಿ ಇಂಡಿಯನ್ ಏರ್‌ಫೋರ್ಸ್‌ನ ವಾರೆಂಟ್ ಅಧಿಕಾರಿಯಾಗಿದ್ದಾರೆ. ಕಳೆದ ದಿವಸ ಐಎಎಫ್ ಅಧಿಕಾರಿಗೆ ತೀವ್ರ ಜ್ವರ ಬಾಧಿಸಿತ್ತು. ನಂತರ ಏರ್‌ಫೋರ್ಸ್ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಿಕೊಳ್ಳಲಾಗಿತ್ತು ಎಂದು ಚೀಫ್ ಮೆಡಿಕಲ್ ಆಫಿಸರ್ ನೆಪಾಲ್ ಸಿಂಗ್ ಹೇಳಿದರು.
ಜ್ವರದೊಂದಿಗೆ ಅವರಿಗೆ ಇತರ ಲಕ್ಷಣಗಳು ಗೋಚರಿಸಿದ್ದರಿಂದ ಅವರ ಸ್ಯಾಂಪಲ್‍ಗಳನ್ನು ಸಂಗ್ರಹಿಸಿ ಪುಣೆಗೆ ಕಳುಹಿಸಲಾಗಿತ್ತು. ಅಲ್ಲಿನ ವೈರಲಾಜಿ ಲ್ಯಾಬ್‍ನ ಫಲಿತಾಂಶದಲ್ಲಿ ಅಧಿಕಾರಿಗೆ ಝೀಕಾ ವೈರಸ್ ಸೋಂಕು ತಗಲಿರುವುದು ಪತ್ತೆಯಾಗಿದೆ.
ರೋಗಿಯೊಂದಿಗೆ ಸಂಪರ್ಕದಲ್ಲಿದ್ದವರಲ್ಲಿಯೂ ರೋಗ ಲಕ್ಷಣಗಳು ಕಂಡು ಬಂದಿವೆ. ಹೀಗೆ 24 ಮಂದಿಯ ಸ್ಯಾಂಪಲ್ ಸಂಗ್ರಹಿಸಿ ಪುಣೆಯ ಲ್ಯಾಬ್‍ಗೆ ಕಳುಹಿಸಲಾಗಿದೆ ಎಂದು ನೆಪಾಲ್ ಸಿಂಗ್ ತಿಳಿಸಿದ್ದಾರೆ.












