ಕ್ರಿಸ್ ಮಸ್ ರಜೆ – ಹೊಸ ವರ್ಷದ ಪಾರ್ಟಿ ಹಿನ್ನೆಲೆ: ಅಮೇರಿಕದಲ್ಲಿ ಒಂದೇ ದಿನ 10 ಲಕ್ಷ ಮಂದಿಗೆ ಕೊರೋನ…!

0
470

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಒಮಿಕ್ರಾನ್ ಹರಡುತ್ತಿರುವುದರ ನಡುವೆಯೇ ಅಮೆರಿಕದ ಕೊರೋನ ಪ್ರಕರಣಗಳಲ್ಲಿ ದಾಖಲೆ ಹೆಚ್ಚಳವಾಗಿದೆ. ಕಳೆದ ಸೋಮವಾರ ಒಂದೇ ದಿನ ಹತ್ತಲಕ್ಷ ಮಂದಿಗೆ ಕೊರೋನ ದೃಢಪಟ್ಟಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.

ಒಂದೇ ದಿನದಲ್ಲಿ 1,083,948 ಪ್ರಕರಣಗಳು ವರದಿಯಾಗಿವೆ. ಒಂದು ದೇಶದಲ್ಲಿ ಇಷ್ಟು ಹೆಚ್ಚು ಕೊರೊನ ಪ್ರಕರಣಗಳು ಒಂದೇ ದಿನ ಸಿಕ್ಕಿದ್ದು ಇದೇ ಮೊದಲು ಎಂದು ವರದಿ ತಿಳಿಸಿದೆ.

ನಾಲ್ಕು ದಿನಗಳ ಮೊದಲು ಅಮೆರಿಕದಲ್ಲಿ 5,90,000 ಕೊರೊನ ಪ್ರಕರಣಗಳು ವರದಿಯಾಗಿತ್ತು. ಅದರ ದುಪ್ಪಟ್ಟು ಕೊರೊನ ಪ್ರಕರಣಗಳು ಈಗ ವರದಿಯಾಗುತ್ತಿದೆ. ಎರಡು ವರ್ಷ ಮೊದಲು ಮಹಾಮಾರಿ ಆರಂಭವಾದ ಬಳಿಕ ಜಾಗತಿಕ ಮಟ್ಟದಲ್ಲಿ ವರದಿಯಾದ ಅತ್ಯಂತ ಹೆಚ್ಚು ಅದರ ಹರಡುವಿಕೆ ಇತ್ತೀಚೆಗೆ ಗೋಚರಿಸತೊಡಗಿದೆ.
ಕ್ರಿಸ್ ಮಸ್ ಹಾಗೂ ಹೊಸ ವರ್ಷದ ರಜಾ ದಿನಗಳ ಬಳಿಕ ಅಮೆರಿಕದಲ್ಲಿ ಕೊರೋನ ಪ್ರಕರಣ ಹೆಚ್ಚಳವಾಗಿದೆ. ಈ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳು ಹಾಗೂ ಮನೆಗಳಲ್ಲಿ ಸೇರುವುದು ರೋಗ ಹರಡುವಿಕೆಗೆ ಕಾರಣವಾಗುತ್ತಿದೆ.

ಸೋಮವಾರ ಫುಡ್ ಆ್ಯಂಡ್ ಡ್ರಂಗ್ ಅಡ್ಮಿನಿಸ್ಟ್ರೇಶನ್ 12ರಿಂದ 15ವರ್ಷದ ಮಕ್ಕಳಿಗೆ ಫೈಝರ್, ಬಯೊಎನ್‍ಟೆಕ್ ವ್ಯಾಕ್ಸಿನ್‍ನ ಮೂರನೇ ಡೋಸ್ ಬಳಸಲು ಅಂಗೀಕಾರ ನೀಡಿದೆ. ಬೂಸ್ಟರ್ ಡೋಸ್‍ನ ಮಧ್ಯಂತರ ಸಮಯ ಆರು ತಿಂಗಳಿದ್ದುದನ್ನು ಐದು ತಿಂಗಳು ಮಾಡಲಾಗಿದೆ.