ಜಾರ್ಜ್ ಫ್ಲಾಯ್ಡ್ ನಿಕಟ ಸಂಬಂಧಿಕರ ಮೇಲೆ ಗುಂಡಿನ ದಾಳಿ; ನಾಲ್ಕು ವರ್ಷದ ಬಾಲಕಿಗೆ ಗಂಭೀರ ಗಾಯ

0
360

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್: ಬಿಳಿಯ ಪೊಲೀಸನ ಜನಾಂಗೀಯ ದ್ವೇಷಕ್ಕೆ ಬಲಿಯಾದ ಆಫ್ರೊ-ಅಮೆರಿಕನ್ ಜಾರ್ಜ್ ಫ್ಲಾಯ್ಡ್ ನಿಕಟ ಸಂಬಂಧಿಕರ ಮೇಲೆ ಗುಂಡಿನ ದಾಳಿ ನಡೆದಿದ್ದು ಘಟನೆಯಲ್ಲಿ ನಾಲ್ಕುವರ್ಷ ಮಗುವಿಗೆ ಗುಂಡೇಟು ತಗಲಿತು. ಜನವರಿ ಒಂದರಂದು ಬೆಳಗ್ಗಿನ ಜಾವ ಮೂರು ಗಂಟೆಗೆ ಕುಟುಂಬದ ಮೇಲೆ ದಾಳಿ ನಡೆದಿದೆ. ನಾಲ್ಕು ವರ್ಷದ ಅರಿಯಾನ ಡೆಲನಾ ಗುಂಟೇಟಿಗೆ ತುತ್ತಾಗಿದ್ದು ಗಂಭೀರ ಸ್ಥಿತಿಯಲ್ಲಿದೆ. ಕುಟುಂಬದ ಮೇಲೆ ಪೂರ್ವ ಯೋಜಿತ ಸಂಚಿನ ಪ್ರಕಾರ ಗುಂಡಿನ ದಾಳಿ ನಡೆದಿದೆ ಎಂದು ಅರಿಯಾನಳ ತಂದೆ ಆರೋಪಿಸಿದ್ದಾರೆ.

ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶ್ವಾಸಕೋಸ, ಕರುಳಿಗೆ ಶಸ್ತ್ರಕ್ರಿಯೆ ನಡೆಸಲಾಗಿದೆ. ಮೂರು ಪಕ್ಕೆಲುಬುಗಳು ಮುರಿದಿದೆ. ಕುಟುಂಬದ ಮೇಲೆ ನಡೆದ ದಾಳಿಯ ಕಾರಣವನ್ನು ಪತ್ತೆಹಚ್ಚಲು ಮತ್ತು ಕುಟುಂಬ ಮತ್ತು ಮಗುವನ್ನು ದಾಳಿಗೆ ಗುರಿಯಾಗಿ ಮಾಡಲಾಗಿತ್ತೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹ್ಯೂಸ್ಟನ್ ಪೊಲೀಸರು ತಿಳಿಸಿದರು. ಇದೇ ವೇಳೆ ಬೆಳಗ್ಗೆ ಮೂರು ಗಂಟೆಗೆ ಘಟನೆ ನಡೆದರೂ ಪೊಲೀಸರು ಬೆಳಗ್ಗೆ ಏಳು ಗಂಟೆಯವರೆಗೂ ಅಲ್ಲಿಗೆ ತಲುಪಿರಲಿಲ್ಲ ಎಂಬ ಆರೋಪವು ಕೇಳಿ ಬರುತ್ತಿದೆ.