ಮತ್ತೆ ಲಾಕ್‌ಡೌನ್ ಭೀತಿ: ಮುಂಬೈ ರೈಲು ನಿಲ್ದಾಣದಲ್ಲಿ ಕಿಕ್ಕಿರಿದ ವಲಸೆ ಕಾರ್ಮಿಕರ ದಂಡು; ಅಮಾಯಕ ಜನರ ಮೇಲೆ ಪೊಲೀಸರ ಲಾಠಿ ಪ್ರಹಾರ

0
358

ಸನ್ಮಾರ್ಗ ವಾರ್ತೆ

ಮುಂಬೈ: ಕೊರೋನಾ ಮೊದಲ ಅಲೆಯಲ್ಲಿ ಹಠಾತ್ ಲಾಕ್‌ಡೌನ್ ನಂತರ ದೊಡ್ಡ ನಗರಗಳಿಂದ ಕಾಲ್ನಡಿಗೆ ಮೂಲಕ ಮನೆಗೆ ಹಿಂದಿರುಗಿದ ವಲಸಿಗರ ಹೃದಯ ವಿದ್ರಾವಕ ಚಿತ್ರಗಳನ್ನು ನಾವೆಲ್ಲರೂ ನೋಡಿದ್ದೇವೆ. ಸಾಂಕ್ರಾಮಿಕ ರೋಗದ ಮೂರನೇ ಅಲೆಯಲ್ಲಿ, ಇದೇ ರೀತಿಯ ದೃಶ್ಯವನ್ನು ಮತ್ತೊಮ್ಮೆ ನೋಡಬೇಕಾದ ಪರಿಸ್ಥಿತಿ ಎದುರಾಗಿದೆ. ಮುಂಬೈನಲ್ಲಿ ಲಾಕ್‌ಡೌನ್‌ಗೆ ಹೆದರಿ ವಲಸೆ ಕಾರ್ಮಿಕರು ರೈಲು ನಿಲ್ದಾಣದಲ್ಲಿ ಮೊಕ್ಕಾಂ ಹೂಡಿದ್ದಾರೆ. ಲಾಕ್‌ಡೌನ್‌ಗೂ ಮುನ್ನ ತಮ್ಮ ಗ್ರಾಮ ಮತ್ತು ಮನೆಗಳಿಗೆ ತಲುಪಬೇಕು ಎಂಬುದು ಎಲ್ಲರ ಪ್ರಯತ್ನ.

ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ, ಸಂಪೂರ್ಣ ಲಾಕ್‌ಡೌನ್‌ನ ಚರ್ಚೆಯಿಂದಾಗಿ ವಲಸಿಗರು ಮತ್ತು ವಿಶೇಷವಾಗಿ ಕಾರ್ಮಿಕರು ತುಂಬಾ ಭಯಭೀತರಾಗಿದ್ದಾರೆ. ಗುರುವಾರ ರಾತ್ರಿಯಿಂದಲೇ ಮುಂಬೈನ ಲೋಕಮಾನ್ಯ ತಿಲಕ್ ನಿಲ್ದಾಣದಲ್ಲಿ ವಲಸಿಗರ ಗುಂಪು ಕಿಕ್ಕಿರಿದಿದೆ.

ರೈಲ್ವೆ ಸ್ಟೇಷನ್ ಒಳಗೆ ಪ್ರವೇಶಿಲು ಆರಂಭಿಸಿದಾಗ ಪೊಲೀಸರು ಒಳಗೆ ಬಿಡಲಿಲ್ಲ. ಪೊಲೀಸರು ಲಾಠಿ ಬಲವನ್ನು ತೋರಿಸಿದರು ಮತ್ತು ‘ನೀವು ಓಡಿ ಹೋಗಲೇಬೇಕಾದರೆ ಬಿಹಾರ-ಯುಪಿಗೆ ಏಕೆ ಬರುತ್ತೀರಿ’ ಎಂದು ಹೇಳಿದರು. ಅಸಹಾಯಕ ಕೂಲಿಕಾರ್ಮಿಕರು ನಿಲ್ದಾಣದ ಮುಂದೆ ಧರಣಿ ಕುಳಿತರು. ರೈಲು ಬೆಳಿಗ್ಗೆ ಇತ್ತು. ರಾತ್ರಿ ಬಂದಾಗ ಟಿಕೇಟಿನ ಚಿಂತೆ ಕಾಡುತ್ತಿತ್ತು. ಯಾರ ಬಳಿಯೂ ಟಿಕೆಟ್ ಇಲ್ಲ. ಎಲ್ಲರೂ ಸಾಮಾನ್ಯಕ್ಕೆ ಭೋಗಿಗಳಿಗೆ ಏರಲು ಯೋಜಿಸಿದರಲ್ಲದೇ ಟಿಸಿ ಬಂದರೆ ದಂಡ ಕಟ್ಟಿಯಾದರೂ ಪ್ರಯಾಣ ಮುಂದುವರೆಸಲು ತೀರ್ಮಾನಿಸಿದ್ದಾರೆ.

ರಾತ್ರಿಯಾಗುತ್ತಿದ್ದಂತೆ, ಯುಪಿ-ಬಿಹಾರದ ನೂರಾರು ಜನರ ಶಿಬಿರವು ಲೋಕಮಾನ್ಯ ತಿಲಕ್ ನಿಲ್ದಾಣದ ಹೊರಗೆ ಕಾಣಿಸಿಕೊಳ್ಳಲು ಪ್ರಾರಂಭಿಸಿತು. ಹಸಿವು ಬಾಯಾರಿಕೆಯಿಂದ ಎಲ್ಲರೂ ಹೇಗಾದರೂ ಮನೆ ತಲುಪುವ ಚಿಂತೆಯಲ್ಲಿದ್ದರು. ನಾವು ಯಾವಾಗ ಮನೆಗೆ ತಲುಪುತ್ತೇವೆ ಎಂಬುದೇ ಅವರ ಮುಖಭಾವಗಳಲ್ಲಿ ಗೋಚರಿಸುತ್ತಿತ್ತು. ಬಹುತೇಕ ಕಾರ್ಮಿಕರ ಬಳಿ ಟಿಕೆಟ್ ಅಥವಾ ಆಹಾರ ಇರಲಿಲ್ಲ ಎಂಬುದಾಗಿ ವರದಿಯಾಗಿದೆ.

ನಿಲ್ದಾಣದ ಹೊರಗೆ ಕಾರ್ಮಿಕರು ಟಿಕೆಟ್ ಮತ್ತು ರೈಲಿನ ಬಗ್ಗೆ ಗೊಂದಲಕ್ಕೊಳಗಾಗಿದ್ದಾರೆ. ಪರಿಸ್ಥಿತಿಯ ಬಗ್ಗೆ ಅವರಿಗೆ ವಿವರಿಸಲು ಯಾರೂ ಇಲ್ಲ. ಪೊಲೀಸರ ಬಳಿ ಹೋದರೆ ಲಾಠಿ ಏಟು. ಜನರ ಸುರಕ್ಷತೆಯ ಹೊಣೆ ಹೊತ್ತಿರುವ ಪೊಲೀಸರು ಯಾವ ತಪ್ಪಿಗೆ ಲಾಠಿ ಪ್ರಹಾರ ಮಾಡುತ್ತಿದ್ದಾರೆ ಎಂದು ವಲಸೆ ಕಾರ್ಮಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಿಲ್ದಾಣದಲ್ಲೂ ಟಿಕೆಟ್ ಇಲ್ಲದವರು ವಾಪಸ್ ಬರಬೇಕು ಎಂಬ ಘೋಷಣೆ ಮಾತ್ರ ಮಾಡಲಾಗುತ್ತಿದೆ.

ಕೃಪೆ: ದೈನಿಕ ಭಾಸ್ಕರ್