ಗುಜರಾತಿನ ಕೈಗಾರಿಕಾ ವಲಯದಲ್ಲಿ ಅನಿಲ ಸೋರಿಕೆ: ಆರು ಮಂದಿ ಮೃತ್ಯು

0
558

ಸನ್ಮಾರ್ಗ ವಾರ್ತೆ

ಸೂರತ್: ಗುಜರಾತಿನ ಸೂರತಿನಲ್ಲಿ ಅನಿಲ ಸೋರಿಕೆ ಸಂಭವಿಸಿದ ಪರಿಣಾಮವಾಗಿ ಆರು ಮಂದಿ ಮೃತಪಟ್ಟ ಘಟನೆ ನಡೆದಿದೆ. ಇಪ್ಪತ್ತಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹಲವರು ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೂರತ್‍ನ ಸಚಿನ್ ಜಿಐಡಿಸಿ ಕೈಗಾರಿಕಾ ವಲಯದಲ್ಲಿ ದುರಂತ ಸಂಭವಿಸಿದ್ದು. ರಾಸಾಯನಿಕ ಅನಿಲದ ಟ್ಯಾಂಕರ್‍ನಲ್ಲಿ ಸೋರಿಕೆಯಾಗಿದೆ ಎಂದು ಪ್ರಾಥಮಿಕ ಮಾಹಿತಿಗಳು ಬಹಿರಂಗಪಡಿಸಿವೆ. ಆದರೆ ಖಚಿತ ವಿವರ ಬಹಿರಂಗಗೊಳ್ಳಬೇಕಾಗಿದೆ. ವಿಶ್ವಪ್ರೇಮ ಡೈಯಿಂಗ್ ಆಂಡ್ ಪ್ರಿಂಟಿಂಗ್ ಮಿಲ್‍ನಲ್ಲಿ ಅನಿಲ ಸೋರಿಕೆಯಾಗಿದ್ದು, ಈ ಕಂಪೆನಿಯ ಸಿಬ್ಬಂದಿಗಳೇ ಮೃತಪಟ್ಟವರು ಎಂದು ತಿಳಿದು ಬಂದಿದೆ.