ಸನ್ಮಾರ್ಗ ವಾರ್ತೆ
ಪಾಂಬಾಡಿ: ತಂದೆಯನ್ನು ಪೊಲೀಸರು ಪೋಕ್ಸೊ ಪ್ರಕರಣದಡಿಯಲ್ಲಿ ಬಂಧಿಸಿ ಕರೆದೊಯ್ದಾಗ ಮನನೊಂದ ಮಗನೋರ್ವ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡ ದುರದೃಷ್ಟಕರ ಘಟನೆ ಕೇರಳದಲ್ಲಿ ನಡೆದಿದೆ.
ಕಾರಯ್ಕ್‍ಮಟ್ಟಂ ಪರಂಬಿಲ್ ಅಖಿಲ್ ಎಂಬ ಇಪ್ಪತ್ತೈದು ವರ್ಷದ ತಂದೆಯ ಬಂಧನದಿಂದ ಯುವಕ ಅವಮಾನಿತನಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅಖಿಲ್‍ನ ತಂದೆ ಓಮನಕುಟ್ಟನನ್ನು ಇತ್ತೀಚೆಗಷ್ಟೇ ಪೊಕ್ಸೊ ಪ್ರಕರಣದಲ್ಲಿ ಬಂಧಿಸಿದ್ದರು. ಈತನೀಗ ರಿಮಾಂಡಿನಲ್ಲಿದ್ದಾನೆ. ಅಖಿಲ್ ಆತ್ಮಹತ್ಯೆ ಮಾಡಿಕೊಳ್ಳುವಾಗ ಪತ್ರ ಬರೆದಿಟ್ಟಿದ್ದಾನೆ. ಪಾಂಬಾಡಿಯ ಒಂದು ಖಾಸಗಿ ಸಂಸ್ಥೆಯಲ್ಲಿ ಅಖಿಲ್ ಕೆಲಸ ಮಾಡುತ್ತಿದ್ದ ಎಂದು ವರದಿಯಾಗಿದೆ. ಆತನ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.












