ಫೆಬ್ರವರಿ 1. ವಿಶ್ವ ಹಿಜಾಬ್ ದಿನಾಚರಣೆಯ ಪ್ರಯುಕ್ತ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್(ಜಿಐಓ) ಹಲವು ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಈ ಪ್ರಯುಕ್ತ ಜಿಐಓ ಕರ್ನಾಟಕ ವಲಯದ ವತಿಯಿಂದ ಬೆಂಗಳೂರು, ಉಡುಪಿ, ದಕ್ಷಿಣ ಕನ್ನಡ, ಗುಲಬರ್ಗಾ, ಮೈಸೂರು,ಮಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಹಿಜಾಬ್ ನ ಮಹತ್ವ ತಿಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಶ್ವ ಹಿಜಾಬ್ ದಿನವನ್ನು ಸಾರ್ವಜನಿಕವಾಗಿ ಮುಸ್ಲಿಮೇತರರೊಂದಿಗೆ ಹಂಚಿಕೊಂಡ ಹಾಗೂ ಕೊಲಾಜ್ ಗಳ ಮೂಲಕ ಹಿಜಾಬ್ ನ ಮಹತ್ವ ಸಾರಿದ ಒಂದು ಝಲಕ್ ಇಲ್ಲಿ ಕಾಣಬಹುದು.


























