ಭಯೋತ್ಪಾದನಾ ದಾಳಿ ಸಂಭಾವ್ಯತೆ: ದಿಲ್ಲಿಯಲ್ಲಿ ಕಟ್ಟೆಚ್ಚರ

0
408

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಭಯೋತ್ಪಾದಕ ಸಂಘಟನೆಯೊಂದು ಬೆದರಿಕೆ ನೀಡಿದ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸುರಕ್ಷಾ ತಪಾಸಣೆಯನ್ನು ದಿಲ್ಲಿ ಪೊಲೀಸರು ಬಿಗಿಗೊಳಿಸಿದ್ದಾರೆ. ಒಂದು ಅಜ್ಞಾತ ಇ-ಮೇಲ್ ಉತ್ತರಪ್ರದೇಶ ಪೊಲೀಸರಿಗೆ ಬಂದಿದ್ದು, ಭಯೋತ್ಪಾದನಾ ದಾಳಿಯ ಸೂಚನೆ ಇದರಲ್ಲಿತ್ತು. ಈ ಇ-ಮೇಲ್ ವಿವರ ಉತ್ತರಪ್ರದೇಶ ಪೊಲೀಸರು ಹಸ್ತಾಂತರಿಸಿದ್ದು, ನಂತರ ಅತೀವ ಕಟ್ಟೆಚ್ಚರವಹಿಸಲಾಗುತ್ತಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದರು.

ಇದರ ಹಿಂದೆ ಟಿಇಟಿ ಇದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ದಿಲ್ಲಿಯ ಜನನಿಬಿಡ ಸರೋಜಿನಿ ಮಾರ್ಕೆಟ್ ಪ್ರದೇಶದಲ್ಲಿ ಸುರಕ್ಷಾ ವ್ಯವಸ್ಥೆ ನಿನ್ನೆ ಪೊಲೀಸರು ತಪಾಸಿಸಿದರು.

ಇದೇ ವೇಳೆ, ಸುರಕ್ಷ ಬೆದರಿಕೆ ಹಿನ್ನೆಲೆಯಲ್ಲಿ ಸರೋಜಿನಿ ನಗರ ಮಾರ್ಕೆಟ್ ಮಂಗಳವಾರ ಬಂದ್ ಮಾಡಿದ್ದಾಗಿ ಮಿನಿ ಮಾರ್ಕೆಟ್ ಟ್ರೇಡ್ ಅಸೋಸಿಯೇಶನ್ ಅಧ್ಯಕ್ಷ ಅಶೋಕ್ ರಣ್‍ಧಾವ ತಿಳಿಸಿದರು.
ಆದರೆ, ಮಾರುಕಟ್ಟೆ ಬಂದ್ ಮಾಡಿಡಲು ಆದೇಶಿಸಿಲ್ಲ ಎಂದು ದಿಲ್ಲಿ ಪೊಲೀಸರು ತಿಳಿಸಿದರು. ಮಾರ್ಕೆಟ್ ಬಂದ್ ಮಾಡಿಡುವ ಪರಿಸ್ಥಿತಿ ಆಗದಿರುವುದಕ್ಕೆ ನಿನ್ನೆ ರಕ್ಷಣಾ ತಪಾಸಣೆ ನಡೆಸಿದ್ದೆಂದು ಪೊಲೀಸರು ತಿಳಿಸಿದರು. ಘಟನೆಯಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದ್ದು ಇ-ಮೆಲ್ ಕಳುಹಿಸಿದವರ ಕುರಿತು ಶೋಧ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.