‘ಕಾಶ್ಮೀರ ಫೈಲ್ಸ್’ ಚಿತ್ರವನ್ನು ಸಂಘಪರಿವಾರವು ಜನರನ್ನು ವಿಭಜಿಸುವ ಸಾಧನವಾಗಿ ಬಳಸಿಕೊಳ್ಳುತ್ತಿದೆ: ಕಮ್ಯುನಿಸ್ಟ್ ನಾಯಕಿ ಬೃಂದಾ ಕಾರಟ್

0
212

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ‘ಕಾಶ್ಮೀರ ಫೈಲ್ಸ್’ ಚಿತ್ರವನ್ನು ಸಂಘಪರಿವಾರವು ಜನರನ್ನು ವಿಭಜಿಸುವ ಸಾಧನವಾಗಿ ಬಳಸಿಕೊಳ್ಳುತ್ತಿದೆ. ಸಂಘಪರಿವಾರ ಅರ್ಧಸತ್ಯದ ಮೂಲಕ ಜನರನ್ನು ವಿಭಜಿಸುತ್ತಿದೆ ಎಂದು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯೆ ಬೃಂದಾ ಕಾರಟ್ ಹೇಳಿದರು.

ಕಾಶ್ಮೀರ ಪಂಡಿತರು ಸಾಕಷ್ಟು ನೊಂದಿರುವುದು ಸತ್ಯ. ಇದು ಯಾವ ಭಾರತೀಯನೂ ಅನುಭವಿಸಬಾರದ ದುರ್ಗತಿ. ಅವರು ತಮ್ಮ ಮನೆಗಳನ್ನು ತೊರೆಯಬೇಕಾಯಿತು. ಆದರೆ, ಅಲ್ಲಿ ನಡೆದಿರುವುದು ಇಷ್ಟೇ ಅಲ್ಲ. ಇಂತಹ ದುರ್ಗತಿಗೆ ಒಳಗಾದ ಇನ್ನು ಕೆಲವರು ಇದ್ದಾರೆ’ ಎಂದು ಬೃಂದಾ ಹೇಳಿದರು.

ವಿವೇಕ್ ಅಗ್ನಿ ಹೋತ್ರಿ ನಿರ್ದೇಶಿತ ಕಾಶ್ಮೀರ ಫೈಲ್ಸ್ ಮಾರ್ಚ್ 11ಕ್ಕೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ಸಿನೆಮಾವನ್ನು ಸಂಘಪರಿವಾರ ಪ್ರಚಾರದ ಆಯುಧವನ್ನಾಗಿ ಮಾಡಿಕೊಂಡು ದ್ವೇಷ ಹರಡಲು ಉಪಯೋಗಿಸುತ್ತಿದೆ. ಬಿಜೆಪಿ ನೇತೃತ್ವದ ರಾಜ್ಯ ಸರಕಾರಗಳು ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿ ಸರಕಾರಿ ಉದ್ಯೋಗಿಗಳಿಗೆ ಸಿನೆಮಾ ನೋಡಲು ರಜೆ ಘೋಷಿಸುತ್ತಿವೆ‌.