ಸನ್ಮಾರ್ಗ ವಾರ್ತೆ
ರಾಮೇಶ್ವರಂ: ತಮಿಳ್ನಾಡಿನ ಶ್ರೀಲಂಕನ್ ನಿರಾಶ್ರಿತರಿಗೆ ರಾಜ್ಯ ಸರಕಾರ ಪ್ರತ್ಯೇಕ ಶಿಬಿರದ ವ್ಯವಸ್ಥೆ ಮಾಡಿದ್ದು, ರಿಮಾಂಡಿನಲ್ಲಿರುವ 16 ನಿರಾಶ್ರಿತರನ್ನು ರಾಮೇಶ್ವರದ ಮಂಟಪಂ ಶಿಬಿರಕ್ಕೆ ವರ್ಗಾವಣೆ ಮಾಡಲಾಗಿದೆ.
ಇವರಿಗೆ ಹದಿನೈದು ದಿನಗಳ ಕಾಲ ರಿಮಾಂಡನ್ನು ರಾಮೇಶ್ವರಂ ಮ್ಯಾಜಿಸ್ಟ್ರೇಟ್ ಕೋರ್ಟು ವಿಧಿಸಿದ್ದು ನಿರಾಶ್ರೀತರ ಮೊದಲ ತಂಡವು ಶ್ರೀಲಂಕದ ಜಾಫ್ನ, ಕೊಕೊಪಡಯ್ಯನ್ನ ಮಕ್ಕಳ ಸಹಿತ ಆರು ಮಂದಿ ಇದ್ದಾರೆ. ಎರಡನೆ ಬ್ಯಾಚ್ನಲ್ಲಿ ವಾವುನಿಯ ಹತ್ತು ಮಂದಿ ಇದ್ದಾರೆ.
ಶ್ರೀಲಂಕದಿಂದ ತಲೈಮನ್ನಾರ್ ಮೂಲಕ ಧನುಷ್ಕೊಡಿಗೆ ಕಷ್ಟದಿಂದ ಮೂವತ್ತು ಕಿಲೊಮೀಟರ್ ದೂರ ಇದ್ದು ಇವರು ಬೋಟಿನಲ್ಲಿ ಬಂದಿದ್ದಾರೆ. ಇವರಲ್ಲಿ ಕೆಲವರು ಕೇರಳಕ್ಕೂ ತಲಪಬಹುದೆಂದು ವರದಿಯಿದೆ. ಆಹಾರ ವಸ್ತುಗಳು ಖರೀದಿಗೆ ಸಂಗ್ರಹಕ್ಕೆ ಬರುವವರು ಕೇರಳಕ್ಕೆ ಬರುವಾಗ ಸಮುದ್ರದ ದಾರಿಯಲ್ಲಿ ಭದ್ರತೆ ನೀಡಲು ಸೇನಾ ವಿಭಾಗಗಳಿಗೆ ಎಡಿಜಿಪಿ ಇಂಟಲಿಜೆನ್ಸ್ ವಿಶೇಷ ಸೂಚನೆ ನೀಡಿದ್ದಾರೆ.
ವಿದೇಶಿ ವಿನಿಮಯದ ಕೊರತೆಯಿಂದ ಶ್ರೀಲಂಕ ಬಿಕ್ಕಟ್ಟಿನಲ್ಲಿದೆ. ಈ ವರ್ಷ ಆರಂಭದಲ್ಲಿ ಶ್ರೀಲಂಕದ ಸಾಲ 750ಕೋಟಿ ಡಾಲರ್ಗೆ ಏರಿಕೆಯಾಗಿದೆ. 1948ರಲ್ಲಿ ಸ್ವಾತಂತ್ರ್ಯ ಲಭಿಸಿದ ಬಳಿಕದ ದೊಡ್ಡ ಸಾಲ ಬಾಧ್ಯತೆ ಇದು. ದೇಶದ ಇಂಧನ ವಿತರಣೆ ನಿಗಾಕ್ಕೆ ನಿಯಂತ್ರಣಕ್ಕೆ ಸರಕಾರ ಪೆಟ್ರೋಲ್ ಬಂಕ್ಗೆ ಸೈನಿಕರ ಕಾವಲಿರಿಸಿದೆ. ವಿದ್ಯುತ್ ಅಡಚಣೆ, ಅಗತ್ಯ ವಸ್ತುಗಳ, ಅಡುಗೆ ಅನಿಲದ ಕೊರತೆಯನ್ನು ಶ್ರೀಲಂಕ ಎದುರಿಸುತ್ತಿದೆ. ಕಾಗದದ ಕೊರತೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಪರೀಕ್ಷೆಯನ್ನು ಮುಂದೂಡಲಾಗಿದೆ.












