ಬಸ್ಸಿನಲ್ಲಿ ಬಿಯರ್ ಕುಡಿದು ವಿದ್ಯಾರ್ಥಿನಿಯರಿಂದ ಗಲಾಟೆ: ಪೊಲೀಸ್, ಶಿಕ್ಷಣ ಇಲಾಖೆಯಿಂದ ತನಿಖೆ

0
489

ಸನ್ಮಾರ್ಗ ವಾರ್ತೆ

ಚೆನ್ನೈ: ಚಲಿಸುವ ಬಸ್‌ನಲ್ಲಿ ಬಿಯರ್ ಕುಡಿದ ಕೆಲವು ವಿದ್ಯಾರ್ಥಿನಿಯರು ಗಲಾಟೆ ಮಾಡಿದ ಘಟನೆ ತಿರುಕುಯಿಕುಂಟಂ ಎಂಬಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಚೆಂಗಲ್ ಪೇಟ್‌ನಿಂದ ತಚ್ಚೂರಿಗೆ ಸರಕಾರಿ ಬಸ್‍ನಲ್ಲಿ ಹೊರಟಿದ್ದರು. ಪ್ರಯಾಣದ ಮಧ್ಯೆ ಒಬ್ಬಳು ವಿದ್ಯಾರ್ಥಿನಿ ಬಿಯರ್ ಬಾಟ್ಲಿ ತೆಗೆದು ಕುಡಿದಿದ್ದಳು.

ನಂತರ ಹತ್ತಿರದಲ್ಲಿದ್ದ ವಿದ್ಯಾರ್ಥಿನಿಯರು ಬಿಯರ್ ಕುಡಿದರು. ಹೀಗೆ ಒಬ್ಬೊಬ್ಬರೆ ಕಡಿದ ನಂತರ ವಿದ್ಯಾರ್ಥಿನಿಯರು ಬಸ್‍ನಲ್ಲಿ ಬೊಬ್ಬೆ ಹೊಡೆದರು. ಬೇರೆ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ನೋಡುತ್ತಿರುವುದು ಇವೆಲ್ಲ ವೀಡಿಯೊದಲ್ಲಿದೆ. 34 ಸೆಕೆಂಡಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಶಾಲೆ ಬಿಟ್ಟ ಕೂಡಲೇ ಈ ಘಟನೆ ನಡೆದಿದ್ದು, ಇಂತಹ ಘಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿನಿಯರನ್ನು ಕೌನ್ಸಿಲಿಂಗ್‌ಗೆ ಗುರಿಪಡಿಸಲಾಗುವುದು ಎಂದು ಜಿಲ್ಲಾ ಪ್ರಿನ್ಸಿಪಾಲ್ ಎಜ್ಯುಕೇಶನ್ ಆಫಿಸರ್ ಮೇರಿರೋಸ್ ನಿರ್ಮಲಾ, ಜಿಲ್ಲಾ ವಿದ್ಯಾಭ್ಯಾಸ ಅಧಿಕಾರಿ ದಾಮೋದರನ್ ತಿಳಿಸಿದರು. ಘಟನೆಯಲ್ಲಿ ಪೊಲೀಸರು, ಶಿಕ್ಷಣ ಇಲಾಖೆ ಮತ್ತು ಶಾಲೆಯ ಅಧ್ಯಾಪಕರು ತನಿಖೆ ಆರಂಭಿಸಿದ್ದಾರೆ.