ಮಂಗಳೂರು: ಮಾರ್ಚ್ 26ರಂದು ಉಚಿತ ಯುನಾನಿ ವೈದ್ಯಕೀಯ ಶಿಬಿರ ಹಾಗೂ ಹಿಜಾಮ ಚಿಕಿತ್ಸೆ

0
449

ಸನ್ಮಾರ್ಗ ವಾರ್ತೆ

ಮಂಗಳೂರು: ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು, ಮಂಗಳೂರು ವೆಲ್ಫೇರ್ ಅಸೋಸಿಯೇಶನ್(ಶಾದಿ ಮಹಲ್) ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ, ರಾಷ್ಟ್ರೀಯ ಯುನಾನಿ ದಿನಾಚರಣೆ-2022ರ ಅಂಗವಾಗಿ ಉಚಿತ ಯುನಾನಿ ವೈದ್ಯಕೀಯ ಶಿಬಿರ ಮತ್ತು ಹಿಜಾಮ ಚಿಕಿತ್ಸಾ ಶಿಬಿರವನ್ನು ದಿನಾಂಕ 26ರ ಶನಿವಾರದಂದು ನಡೆಸಲು ತೀರ್ಮಾನಿಸಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕರೆ ನೀಡಲಾಗಿದೆ‌.

ಶನಿವಾರ ಬೆಳಗ್ಗೆ ಗಂಟೆ 9.00 ರಿಂದ ಮಧ್ಯಾಹ್ನ ಗಂಟೆ 1.00 ರ ತನಕ ಶಾದಿಮಹಲ್ ಬೋಳಾರ್ ಮಂಗಳೂರಿನಲ್ಲಿ ಈ ಕಾರ್ಯಕ್ರಮ‌ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಆಯುಷ್ ಜಿಲ್ಲಾ ವೈದ್ಯಾಧಿಕಾರಿಗಳಾದ ಡಾ| ಮುಹಮ್ಮದ್ ಇಕ್ಬಾಲ್ ಹಾಗೂ ಆಯುಷ್ ಇಲಾಖೆಯ ಇನ್ನಿತರ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಚಾಲಕರನ್ನು ಸಂಪರ್ಕಿಸಿರಿ ಮೊ-8660408961