ಸನ್ಮಾರ್ಗ ವಾರ್ತೆ
ಸ್ಯಾನ್ ಜೋಸ್: ತುರ್ತು ಭೂಸ್ಪರ್ಶದ ಸಮಯದಲ್ಲಿ ಸರಕು ವಿಮಾನವೊಂದು ಎರಡು ತುಂಡಾಗಿರುವ ಘಟನೆ ಕೋಸ್ಟರಿಕಾದ ಸ್ಯಾನ್ ಜೋಸ್ನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಹೀಗಾಗಿ, ತಾತ್ಕಾಲಿಕವಾಗಿ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು.
ಜರ್ಮನಿ ನಿರ್ಮಿತ ಡಿಎಚ್ಎಲ್ ವಿಮಾನ ಅಪಘಾತಕ್ಕೊಳಗಾಗಿದ್ದು ನಂತರ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಬೊಯಿಂಗ್ ವಿಮಾನ 757 ಅವಘಡಕ್ಕೊಳಗಾಗಿದ್ದು, ಯಾರೂ ಗಾಯಗೊಂಡಿಲ್ಲ ಎಂದು ವರದಿಗಳು ತಿಳಿಸಿವೆ. ವಿಮಾನ ಹಾರಾಟ ಶುರುಮಾಡಿದ ಕೂಡಲೇ ಹೈಡ್ರಾಲಿಕ್ ಸಮಸ್ಯೆ ಉಂಟಾಯಿತು. ವಿಮಾನವು ಹಿಂಭಾಗದ ಚಕ್ರದ ಬದಿಯಿಂದ ತುಂಡಾಗಿದೆ.
ಈ ಸರಕು ವಿಮಾನದಲ್ಲಿ ಇಬ್ಬರು ಸಿಬ್ಬಂದಿ ಮಾತ್ರ ಇದ್ದರು. ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲ. ಆದರೂ ಮುನ್ನೆಚ್ಚರಿಕೆಯ ಸಲುವಾಗಿ ತುರ್ತಾಗಿ ಆಸ್ಪತ್ರೆಗೆ ಸೇರ್ಪಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಲ್ಯಾಂಡಿಂಗ್ನ ವೇಳೆ ವಿಮಾನದಿಂದ ಹೊಗೆ ಹೊರ ಬರುವುದು ವೀಡಿಯೊದಲ್ಲಿ ದಾಖಲಾಗಿದೆ.












