ಸರಕಾರಕ್ಕೆ ಜಮಾಅತನ್ನು ಬ್ಯಾನ್ ಮಾಡುವ ಅಧಿಕಾರವಿಲ್ಲ: ಬಾಂಗ್ಲಾ ಪ್ರಧಾನಿ ಶೈಖ್ ಹಸೀನಾ

0
1662

ನ್ಯಾಯಾಲಯದಲ್ಲಿ ಜಮಾಅತ್ ನಿಷೇಧದ ಕುರಿತಾದ ಪ್ರಕರಣವು ಬಾಕಿ ಉಳಿದಿರುವುದರಿಂದ ಸರಕಾರಕ್ಕೆ ಯಾವುದೇ ರೀತಿಯಲ್ಲಿ ಜಮಾಅತನ್ನು ಬ್ಯಾನ್ ಮಾಡುವ ಅಧಿಕಾರವಿಲ್ಲ ಎಂದು ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೈಖ್ ಹಸೀನಾ ತಿಳಿಸಿದ್ದಾರೆ.
ಸಂಸತ್ತಿನಲ್ಲಿ ತರೀಕತ್ ಫೆಡರೇಷನ್ ಚೇರ್ಮನ್ ಆದ ಸೈಯ್ಯದ್ ನಜೀಬುಲ್ ಬಶರ್ ಮೈಜಾವಂದರಿಯವರು ಜಮಾಅತ್ ನಿಷೇಧದ ಕುರಿತು ಕೇಳಿದ ಪ್ರಶ್ನಗೆ ಶೈಖ್ ಹಸೀನಾ ಉತ್ತರಿಸಿದರು.

ಜಮಾಅತ್ ನಿಷೇಧದ ಕುರಿತಾದ ಪ್ರಕರಣವು ನ್ಯಾಯಾಲಯದಲ್ಲಿ ಮೊಕದ್ದಮೆಯು ಬಾಕಿ ಉಳಿದಿರುವುದರಿಂದ ನ್ಯಾಯಾಲಯದ ತೀರ್ಪು ಹೊರಬೀಳುವವರೆಗೂ ಸರಕಾರಕ್ಕೆ ಏನು ಮಾಡಲು ಸಾಧ್ಯವಾಗದು. ಶೀಘ್ರವಾಗಿ ನ್ಯಾಯಾಲಯವು ಜಮಾಅತ್ ನಿಷೇಧಕ್ಕೆ ಆದೇಶ ನೀಡುವುದೆಂಬ ಭರವಸೆ ನಮಗಿದೆ ಎಂದವರು ನುಡಿದರು.