ಜಮ್ಮು ಗಡಿಯಲ್ಲಿ ಭಯೋತ್ಪಾದಕರ ಸುರಂಗ ಪತ್ತೆ

0
458

ಸನ್ಮಾರ್ಗ ವಾರ್ತೆ

ಶ್ರೀನಗರ: ಜಮ್ಮು ಕಾಶ್ಮೀರದ ಸಾಂಬ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಭಯೋತ್ಪಾದಕರು ಮಾಡಿದ ಸುರಂಗವನ್ನು ಗಡಿ ಸುರಕ್ಷಾ ಸೇನೆ ಪತ್ತೆ ಹಚ್ಚಿದೆ. ಒಂದು ತಿಂಗಳ ಕಾಲ ಇಡೀ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ ಹುಡುಕಾಟ ನಡೆಸಿತ್ತು.

ಅಮರ್‍ನಾಥ್ ಯಾತ್ರೆಯನ್ನು ಹಾಳುಗೆಡಹುವ ಭಯೋತ್ಪಾದಕರ ಯತ್ನ ಇದರಿಂದ ವಿಫಲವಾಗಿದೆ ಎಂದು ಸಿಆರ್‌ಪಿಎಫ್ ಮೂಲಗಳು ಹೇಳಿವೆ.
ಪಾಕಿಸ್ತಾನದ ಕಡೆಯಿಂದ ಭಾರತದ ಗಡಿಯೊಳಗೆ ಈ ಸುರಂಗವಿದೆ. 150 ಕಿಲೋ ಮೀಟರ್ ಉದ್ದವಿದೆ. ಎರಡು ಅಡಿ ಅಗಲ ಸುರಂಗದ ಮುಖ ಇದೆ. 21 ಹೊಯ್ಗೆ ತುಂಬಿದ ಗೋಣಿಯಿಂದ ಸುರಂಗದ ಬಾಯಿಯನ್ನು ಮುಚ್ಚಿಡಲಾಗಿತ್ತು. ಹೆಚ್ಚಿನ ತಪಾಸಣೆ ನಡೆಯುತ್ತಿದ್ದು ಸುರಂಗ ತುಂಬಾ ಹಳೆಯದಲ್ಲ ಎಂದು ಅಂದಾಜಿಸಲಾಗಿದೆ.

ಭಾರತದ ಗಡಿಯ ಪೋಸ್ಟ್‌ನಿಂದ 300 ಮೀಟರ್ ದೂರದಲ್ಲಿ ಸುರಂಗದ ದ್ವಾರವಿದೆ. ಎಪ್ರಿಲ್ 22ಕ್ಕೆ ಸಿಐಎಸ್‍ಎಫ್ ಬಸ್ ಮೇಲೆ ಆತ್ಮಾಹುತಿ ದಾಳಿಕೋರರನ್ನು ಗುಂಡಿನ ದಾಳಿಯ ನಂತರ ಈ ಪ್ರದೇಶದಲ್ಲಿ ವ್ಯಾಪಕ ತಪಾಸಣೆ ನಡೆಯುತ್ತಿತ್ತು. ಈ ವೇಳೆ ಸುರಂಗ ಪತ್ತೆಯಾದ್ದು, ಬಹಳ ಎಚ್ಚರಿಕೆಯಿಂದ ವರ್ತಿಸಿದ ಸೇನೆಯ ಸದಸ್ಯರನ್ನು ಬಿಎಸ್‍ಎಫ್ ಐಜಿ ಡಿ.ಕೆ,ಬುರ ಅಭಿನಂದಿಸಿದ್ದಾರೆ. ಒಂದೂವರೆ ವರ್ಷದಲ್ಲಿ ಗಡಿಯಲ್ಲಿ ಕಂಡು ಬಂದ ಐದನೇ ಸುರಂಗವಿದು.