ಸನ್ಮಾರ್ಗ ವಾರ್ತೆ
ಮುಂಬೈ: ಮಹಾರಾಷ್ಟ್ರದ ನಾಗಪುರದ ಕೊಲವಾಡ ಗ್ರಾಮದಲ್ಲಿ ಗ್ರಾಮಸ್ಥರಿಂದ ಹಣ ಸಂಗ್ರಹಿಸಿ ಮಸೀದಿಗೆ ಧ್ವನಿವರ್ಧಕವನ್ನು ಉಡುಗೊರೆ ನೀಡಿದ ಘಟನೆ ವರದಿಯಾಗಿದೆ. ಕೊಲ್ವಾಡ ಗ್ರಾಮದಲ್ಲಿ ಮುಸ್ಲಿಮರು ಇಲ್ಲದಿದ್ದುದರಿಂದ ಇಲ್ಲಿ ಮಸೀದಿಯೂ ಇಲ್ಲ. ಆರು ಕಿಲೊ ಮೀಟರ್ ದೂರದ ಕಿನೊಲ ಗ್ರಾಮದ ಮಸೀದಿಗೆ ಕೊಲ್ವಾಡದ ಹಿಂದೂ ಬಾಂಧವರು ಧ್ವನಿವರ್ಧಕವನ್ನು ಉಡುಗೊರೆ ನೀಡಿದ್ದಾರೆ.
ಈ ಪ್ರದೇಶದಲ್ಲಿಯೇ ಇರುವ ಏಕೈಕ ಮಸಿದಿ ಕೊನೊಲದ್ದಾಗಿದ್ದು, ಇಲ್ಲಿ ಧ್ವನಿವರ್ಧಕ ಇದೆ. ಆದರೆ ಈದ್ ಕೊಡುಗೆಯಾಗಿ ಧ್ವನಿವರ್ಧಕವನ್ನು ಸ್ವೀಕರಿಸಲು ಮಸೀದಿಗೆ ಸಂಬಂಧಿಸಿದವರನ್ನು ಕೊಲ್ವಾಡ ಗ್ರಾಮದ ಜನರು ಕರೆದಿದ್ದರು.
ಈಗ ನಡೆಯುತ್ತಿರುವ ದ್ವೇಷ ಪ್ರಚಾರದ ವಿರುದ್ಧ ಪ್ರತಿಭಟನೆಯಾಗಿ ಮೈಕ್ ನೀಡಿದ್ದೆವೆಂದು ಮತ್ತು ಗ್ರಾಮದ ಶಾಂತಿ ಸಮಿತಿಯ ಅಧ್ಯಕ್ಷ ಉಮೇಶ್ ಪಾಟೀಲ್ ಹೇಳಿದರು. ಧ್ವನಿವರ್ಧಕದ ಕುರಿತು ಮಹಾರಾಷ್ಟ್ರದಲ್ಲಿ ಹಠಾತ್ ದ್ವೇಷ ಪ್ರಚಾರ ಆರಂಭಿಸಿ ಕೋಮು ಗಲಭೆಗೆ ಸಿದ್ಧತೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಮಹಾರಾಷ್ಟ್ರದ ಗ್ರಾಮೀಣ ಪ್ರದೇಶಗಳಲ್ಲಿ ಹಿಂದೂ-ಮುಸ್ಲಿಮರು ತುಂಬ ಶಾಂತಿಯಿಂದ ಬದುಕುತ್ತಿದ್ದಾರೆ. ಗುಣಮಟ್ಟ ರಹಿತ ರಾಜಕಾರಿಣಿಗಳು ಜನರನ್ನು ಪ್ರಚೋದಿಸಿ ಕೋಮು ರಾಜಕೀಯ ಮಾಡುತ್ತಿರುವಾಗ ನಾವು ಅದಕ್ಕೆ ಆಸ್ಪದ ಕೊಡುವವರಲ್ಲ ಎಂದೂ ಉಮೇಶ್ ಪಾಟೀಲ್ ಈ ಸಂದರ್ಭದಲ್ಲಿ ತಿಳಿಸಿದರು.












