ರಾಷ್ಟ್ರಪತಿ ಚುನಾವಣೆ: ಮತದಾನ‌ ಪ್ರಗತಿಯಲ್ಲಿ

0
435

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಭಾರತದ 15ನೇ ರಾಷ್ಟ್ರಪತಿ ಚುನಾವಣೆ ಚುನಾವಣೆ ಇಂದು ನಡೆಯುತ್ತಿದೆ. 4800 ಸಂಸದರು, ಶಾಸಕರು ಇಂದು ಮತದಾನ ಮಾಡುವರು. ಎನ್‍ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು, ಪ್ರತಿಪಕ್ಷದಿಂದ ಯಶ್ವಂತ್ ಸಿನ್ಹಾ ಸ್ಪರ್ಧಿಸುತ್ತಿದ್ದಾರೆ. ಪಾರ್ಲಿಮೆಂಟು ಮಂದಿರದಲ್ಲಿ ವಿವಿಧ ರಾಜ್ಯಗಳ ವಿಧಾನ ಸಭೆಗಳಲ್ಲಿ ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಮತದಾನ ನಡೆಯುತ್ತದೆ.

ಸಂಸದರಿಗೆ ಹಸಿರು, ಶಾಸಕರಿಗೆ ಗುಲಾಬಿ ಬಣ್ಣದ ಬ್ಯಾಲೆಟ್ ಪೇಪರ್ ನೀಡಲಾಗುತ್ತದೆ. ವಯಲೆಟ್ ಇಂಕಿನ ವಿಶೇಷ ಪೆನ್ನು ಮತದಾನಕ್ಕೆ ಉಪಯೋಗಿಸುವುದು. 21ರಂದು ಮತ ಎಣಿಕೆ ನಡೆಯಲಿದೆ. ಜುಲೈ 25ರಂದು ರಾಷ್ಟ್ರಪತಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಒಡಿಸ್ಸದ ಬಿಜು ಜನತಾದಳ, ಆಂಧ್ರದ ವೈಎಸ್‍ಆರ್ ಕಾಂಗ್ರೆಸ್ ಟಿಡಿಪಿ, ಬಿಎಸ್‍ಪಿ , ಶಿವಸೇನೆ, ಝಾರ್ಕಂಡ್ ಮುಕ್ತಿ ಮೋರ್ಚಾ, ಶಿರೋಮಣಿ ಅಕಾಳಿದಳ ಎನ್‍ಡಿಎಯಲ್ಲಿಲ್ಲ. ಆದರೆ ಮುರ್ಮುರವರ ಪರ ಬೆಂಬಲ ಸೂಚಿಸಿವೆ‌. ಹೀಗಾಗಿ ಶೇ.60ರಷ್ಟು ಮತಗಳು ಮರ್ಮುರವರಿಗೆ ಲಭಿಸುತ್ತವೆ ಎಂಬುದಾಗಿ ಅಂದಾಜಿಸಲಾಗಿದೆ.

ಪ್ರತಿಪಕ್ಷ ಅಭ್ಯರ್ಥಿ ಯಶ್ವಂತ್ ಸಿನ್ಹಾ ಆತ್ಮಸಾಕ್ಷಿಯ ಮತದಾನ ಮಾಡಲು ಸಂಸದರು ಮತ್ತು ಶಾಸಕರಿಗೆ ಕರೆ ನೀಡಿದರು. ಅತಿ ಹೆಚ್ಚು ಮತಮೌಲ್ಯವು ಉತ್ತರಪ್ರದೇಶದಲ್ಲಿದ್ದು, ಅತ್ಯಂತ ಕಡಿಮೆ ಸಿಕ್ಕಿಂನಲ್ಲಿದೆ.