ವೇತನವಿಲ್ಲದೇ ದುಡಿಯುತ್ತಿರುವ 17,848 ಅನಿವಾಸಿ ಭಾರತೀಯರು!

0
565

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ವಿದೇಶಗಳಲ್ಲಿ ದುಡಿಯುತ್ತಿರುವ 17,848 ಭಾರತೀಯ ಪ್ರಜೆಗಳು ಸಂಬಳ ಲಭಿಸದೆ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ವಿದೇಶ ಸಹಸಚಿವ ವಿ.ಮುರಳೀಧರನ್ ಲೋಕಸಭೆಗೆ ತಿಳಿಸಿದರು. ಬೆನ್ನಿ ಬೆಹನ್ನನ್ ಸಂಸದರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

2020 ಮಾರ್ಚ್‌ನಿಂದ 2021 ಡಿಸೆಂಬರ್‌ನ ನಡುವಿನ ದತ್ತಾಂಶಗಳ ಪ್ರಕಾರ ಸಚಿವಾಲಯದ ವಿವರಗಳನ್ನು ಲೋಕಸಭೆಯಲ್ಲಿ ಸಚಿವರು ತಿಳಿಸಿದ್ದಾರೆ.

ಉನ್ನತಮಟ್ಟದ ಉಭಯಕಕ್ಷಿ ಸಭೆಗಳಲ್ಲಿ ಭಾರತೀಯರು ಎದುರಿಸುತ್ತಿರುವ ಇಂತಹ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಸಚಿವಾಲಯ ಆಗ್ರಹಿಸಿದೆ. ವಿದೇಶ ಸಚಿವಾಲಯದ ಆನ್‍ಲೈನ್ ಪೋರ್ಟಲ್ ‘ಮದದ್’ ಮೂಲಕ ಒಪ್ಪಂದ ಉಲ್ಲಂಘನೆ ಸಮಸ್ಯೆ, ನಷ್ಟ ಪರಿಹಾರ, ಬಾಕಿ, ಕಾರ್ಮಿಕರ ದುರುಪಯೋಗ ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.