ಕೂಲಿ ಕಾರ್ಮಿಕನೊಂದಿಗೆ ಪ್ರೇಮ ವಿವಾಹ: ಪುತ್ರಿ ಹಾಗೂ ಅಳಿಯನನ್ನು ಕಡಿದು ಕೊಲೆಗೈದ ತಂದೆ

0
461

ಸನ್ಮಾರ್ಗ ವಾರ್ತೆ

ಚೆನ್ನೈ: ಕೂಲಿ ಕಾರ್ಮಿಕನನ್ನು ಪ್ರೀತಿಸಿ ಮದುವೆಯಾದ ಮಗಳು ಮತ್ತು ಅವಳ ಗಂಡನನ್ನು ಯುವತಿಯ ತಂದೆ ಮನೆಗೆ ನುಗ್ಗಿ ಕಡಿದು ಕೊಲೆಗೈದ ಘಟನೆ ತಮಿಳ್ನಾಡಿನ ತೂತ್ತುಕುಡಿ ಜಿಲ್ಲೆಯ ವೀರಪ್ಪಟ್ಟಿ ಗ್ರಾಮದಲ್ಲಿ ನಡೆದಿದೆ. ರೇಷ್ಮ ಹಾಗೂ ಮಾಣಿಕ್ ರಾಜು ಮೃತ ದುರ್ದೈವಿಗಳು. ಆರೋಪಿ ತಂದೆ ಮುತ್ತುಕುಟ್ಟಿಯನ್ನು ಪೊಲೀಸರೂ ಬಂಧಿಸಿದ್ದಾರೆ.

ಇತ್ತೀಚೆಗೆ ಮನೆಯಿಂದ ತಪ್ಪಿಸಿಕೊಂಡು ಓಡಿಹೋಗಿದ್ದ ರೇಷ್ಮ ಮಾಣಿಕ್ ರಾಜುವನ್ನು ಮದುವೆಯಾಗಿದ್ದರು. ವೀರಪ್ಪಟ್ಟಿ ಪಂಚಾಯತ್ ಅಧಿಕಾರಿಗಳು ಗ್ರಾಮಕ್ಕೆ ಈ ದಂಪತಿಯನ್ನು ಕರೆ ತಂದಿದ್ದರು. ಪಂಚಾಯತ್ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿದರೂ ಮುತ್ತುಕುಟ್ಟಿ ಒಪ್ಪಿರಲಿಲ್ಲ.

ಕೂಲಿ ಕಾರ್ಮಿಕ ಅಳಿಯನನ್ನು ಒಪ್ಪಲು ಮುತ್ತುಕುಟ್ಟಿ ಸಿದ್ಧರಿರಲಿಲ್ಲ. ಮನೆಗೆ ಬರಲು ಬಿಡಲಿಲ್ಲ. ಬಾಡಿಗೆ ಮನೆ ಮಾಡಿ ದಂಪತಿ ವಾಸವಿದ್ದರು.

ವೀರಪ್ಪಟ್ಟಿ ಗ್ರಾಮದ ಆರ್‌ಸಿ ಸ್ಟ್ರೀಟ್ ನಿವಾಸಿಗಳಾದ ಇಬ್ಬರು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ರೇಷ್ಮಾರ ಕುಟುಂಬ ಇದನ್ನು ತೀವ್ರವಾಗಿ ವಿರೋಧಿಸಿತ್ತು. ಮದುವೆಯ ನಂತರವೂ ಕೂಲಿಕಾರ್ಮಿಕ ಅಳಿಯನನ್ನು ಮನೆಯವರು ಒಪ್ಪಲಿಲ್ಲ. ತಮ್ಮ ಮನೆಗೆ ಬರಲು ಬಿಡಲಿಲ್ಲ.

ಸಂಜೆ ಇಬ್ಬರು ವಾಸವಿದ್ದ ಮನೆಗೆ ಮುತ್ತುಕುಟ್ಟಿ ಮತ್ತು ಇತರ ಇಬ್ಬರು ಕತ್ತಿಯೊಂದಿ ಆಗಮಿಸಿದ್ದು, ಇಬ್ಬರು ಮೃತರಾಗಿದ್ದಾರೆ ಎಂಬುದನ್ನು ಖಾತರಿ ಪಡಿಸಿಕೊಂಡ ಬಳಿಕ ಅಲ್ಲಿಂದ ತೆರಳಿದ್ದರು. ಮುತ್ತುಕುಟ್ಟಿ ಮಗಳು ಅಳಿಯನ ಕೊಲೆ ಮಾಡಿದ್ದು ಗೊತ್ತಾಗಿ ಪೊಲೀಸರು ಬಂದು ಮೃತದೇಹಗಳನ್ನು ಕೊವಿಲ್‍ಪೆಟ್ಟಿ ಸರಕಾರಿ ಆರೋಗ್ಯ ಆಸ್ಪತ್ರೆಗೆ ಕಳುಹಿಸಿದ್ದಾರೆ. ಘಟನಾ ಸ್ಥಳದಿಂದ ಮುತ್ತುಕುಟ್ಟಿ ತಪ್ಪಿಸಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಅವನನ್ನು ಪೊಲೀಸರು ಬಂಧಿಸಿದ್ದಾರೆ.