ಸುರತ್ಕಲ್ ಫಾಝಿಲ್ ಮನೆಗೆ ಭೇಟಿ ನೀಡಿ ಸಂತೈಸಿದ ಜಮಾಅತೆ ಇಸ್ಲಾಮೀ ಹಿಂದ್ ನಿಯೋಗ

0
414

ಸನ್ಮಾರ್ಗ ವಾರ್ತೆ

ಮಂಗಳೂರು: ಕಳೆದ ಗುರುವಾರ ರಾತ್ರಿ ದುಷ್ಕರ್ಮಿಗಳಿಂದ ಕ್ರೂರವಾಗಿ ಹತ್ಯೆಯಾದ ಮಂಗಳಪೇಟೆ ನಿವಾಸಿ ಫಾಝಿಲ್‌‌ ಮನೆಗೆ ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಳ್ ಮದನಿಯವರ ನೇತೃತ್ವದಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ನಿಯೋಗ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ, ಆಶ್ವಾಸನೆ ನೀಡಿತು.

ನಿಯೋಗದಲ್ಲಿ ರಾಜ್ಯ ಸಲಹಾ ಸಮಿತಿಯ ಹಿರಿಯ ಸದಸ್ಯರಾದ ಕೆ. ಎಂ. ಶರೀಫ್‌, ರಾಜ್ಯ ಕಾರ್ಯದರ್ಶಿಯವರಾದ ಮುಹಮ್ಮದ್ ಕುಂಞಿ, ಜಿಲ್ಲಾ ಸಂಚಾಲಕರಾದ ಅಮೀನ್‌ ಅಹ್ಸನ್‌, ಸ‌ಈದ್‌ ಇಸ್ಮಾಈಲ್ ಮಂಗಳೂರು, ನಗರಾಧ್ಯಕ್ಷರಾದ ಕೆ. ಎಂ. ಅಶ್ರಫ್‌, ಶರೀಫ್ ಮಂಚೂರ್‌, ಅಬ್ದುರಹ್ಮಾನ್‌ ಕೃಷ್ಣಾಪುರ, ಶಂಶೀರ್ ಪಿಲಾರ್‌ ಉಪಸ್ಥಿತರಿದ್ದರು.