ಪ್ರಜಾಪ್ರಭುತ್ವದಲ್ಲಿ ಸಂವಾದ ಅನಿವಾರ್ಯ
ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಚರ್ಚೆಗಳು ಮತ್ತು ಸಂವಾದಗಳ ಮೂಲಕ ತೀರ್ಮಾನ ಕೈಗೊಳ್ಳಬೇಕು ಎಂದು ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದರು. ಪ್ರಸ್ತುತ ಭಾರತದ ಆರ್ಥಿಕ ಬೆಳವಣಿಗೆ ದರ ನಮ್ಮ ಬೇಡಿಕೆಯನ್ನು ಪೂರ್ತಿಕರಿಸುವುದಿಲ್ಲ. ಜನಸಂಖ್ಯೆಗನುಗುಣವಾಗಿ ಇದು ಆರ್ಥಿಕತೆಗೆ ಸಾಕಾಗುವುದಿಲ್ಲ ಎಂದು ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದರು.
ಭಾರತಕ್ಕೆ ಶೇ.7 ರಷ್ಟು ಆರ್ಥಿಕ ಬೆಳವಣಿಗೆ ದರವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪಾರ್ಲಿಮೆಂಟಿನಲ್ಲಿ ಹೇಳಿದ್ದರು. ಬೆಲೆಯೇರಿಕೆ ಕುರಿತ ಟೀಕೆಗೆ ಉತ್ತರಿಸುವಾಗ ಅವರು ದೇಶದ ಜಿಡಿಪಿಯನ್ನು ಉಲ್ಲೇಖಿಸಿದರು. ಆದರೆ, 7% ಬೆಳವಣಿಗೆ ಭಾರತದ ಆರ್ಥಿಕತೆಗ ಸಾಕುವುದಿಲ್ಲ ಎಂದು ಆರ್ಥಿಕ ತಜ್ಞ ರಘುರಾಮ್ ರಾಜನ್ ಹೇಳುತ್ತಾರೆ. ಹೆಚ್ಚು ಉದ್ಯೋಗವಕಾಶಗಳನ್ನು ಸೃಷ್ಟಿಸಿದರೆ ಮಾತ್ರವೇ ಭಾರತ ಆರ್ಥಿಕ ಕ್ಷೇತ್ರದಲ್ಲಿ ರಕ್ಷೆ ಹೊಂದಬಹು. ನೈಪುಣ್ಯತೆಗೆ ತಕ್ಕುದಾದ ಉದ್ಯೋಗ 7% ಜಿಡಿಪಿಯ ಆರ್ಥಿಕತೆಯಲ್ಲಿ ಜನರಿಗೆ ಲಭಿಸುವುದಿಲ್ಲ ಎಂದು ಅವರು ಹೇಳಿದರು.
ಸಾಕಷ್ಟು ಸಮಾಲೋಚನೆಗಳು, ಚರ್ಚೆಗಳಿಲ್ಲದೆ ತೀರ್ಮಾನ ಕೈಗೊಳ್ಳುತ್ತಿರುವುದು ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಕಂಡು ಬರುತ್ತಿದೆ. ಕೇಂದ್ರ ಸರಕಾರವನ್ನು ಟೀಕಿಸಿ ಅವರು ನೋಟು ನಿಷೇಧ, ಕೃಷಿ ಕಾನೂನನ್ನು ಉದಾಹರಣೆಯಾಗಿ ನೀಡಿದರು. ಸಾಮಾನ್ಯ ಜನರಿಗೆ ಪ್ರಧಾನಿ ಕಚೇರಿಯಲ್ಲಿರುವವರಿಗಿಂತ ಮೂಲಭೂತ ವಾಸ್ತವಿಕತೆಗಳು ಗೊತ್ತಿವೆ. ಸಮಾಲೋಚನೆಗಳಿಂದ ಪ್ರಜಾಪ್ರಭುತ್ವದಲ್ಲಿ ತೀರ್ಮಾನಕ್ಕೆ ಬರಬೇಕೆಂದು ಅವರು ಹೇಳಿದರು.
ಸರಕಾರದ ಕಾನೂನುಗಳು ಕೆಲವೊಮ್ಮೆ ಟೀಕೆಗೆ ಗುರಿಯಾಗುತ್ತವೆ. ಆದರೆ ನಿರಂತರ ಚಪ್ಪಳೆ ಹೊಡೆಯುವರು ಮಾತ್ರ ಸರಿಯಾದವರು ಎಂದು ಸರಕಾರ ಭಾವಿಸುವುದು ಬೇಡ. ಸರಕಾರ ತಪ್ಪುಗಳು ಮಾಡುವುದಿಲ್ಲ ಎಂದು ಸರಕಾರ ಭಾವಿಸುವುದು. ಎಲ್ಲ ಸರಕಾರಗಳೂ ತಪ್ಪು ಮಾಡುತ್ತವೆ ಆದರೆ, ಅದನ್ನು ತಿದ್ದಿಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.












