ಹೊಸದಿಲ್ಲಿ: ಜೈಷೆ ಮುಹಮ್ಮದ್ ಪಾಕಿಸ್ತಾನ ಸೇನೆಯ ಸಂತತಿಯಾಗಿದ್ದು ಪುಲ್ವಾಮದಲ್ಲಿ ನಡೆದ ಭಯೋತ್ಪಾದನಾ ದಾಳಿ ಪಾಕಿಸ್ತಾನ ನಿಯಂತ್ರಿತ ಭಯೋತ್ಪಾದನಾ ದಾಳಿಯಾಗಿದೆ ಎಂದು ಲೆಪ್ಟಿನೆಂಟ್ ಜನರಲ್ ಕನ್ವಾಲ್ ಜಿತ್ ಸಿಂಗ್ ಹೇಳಿದರು. ದಾಳಿಯ ಸೂತ್ರಧಾರನನ್ನು ಹತ್ಯೆ ಮಾಡಿದ್ದೇವೆ ಎಂದು ಭಾರತದ ಸೇನೆ ದೃಢೀಕರಿಸಿತು.
ಭಯೋತ್ಪಾದನಾ ದಾಳಿ ಘಟನೆ ನಡೆದು 100 ಗಂಟೆಗಳೊಳಗೆ ಜೈಷೆ ಮುಹಮ್ಮದ್ನ ಕಾಶ್ಮೀರದ ನಾಯಕರನ್ನು ಹತ್ಯೆ ಮಾಡಲಾಗಿದೆ. ಪಾಕಿಸ್ತಾನದ ಸಹಾಯದೊಂದಿಗೆ ಜೈಷೆ ಮುಹಮ್ಮದ್ ಕಾರ್ಯಾಚರಿಸುತ್ತಿದೆ. ಶಸ್ತ್ರ ಎತ್ತಿದವರನ್ನು ಸರ್ವನಾಶ ಮಾಡಲಾಗುವುದು ಎಂದು ಭೂಸೇನೆಯ ಕಮಾಂಡರ್ ಕೆ.ಜೆ. ಸಿಂಗ್ ದಿಲ್ಲಾನ್ ಹೇಳಿದರು.












