ಸನ್ಮಾರ್ಗ ವಾರ್ತೆ
ರಾಂಚಿ: ಮನೆಯ ಮಾಲಿಕರ ಚಿತ್ರಹಿಂಸೆಯಿಂದಾಗಿ ವಿವಶಾವಸ್ಥೆಗೆ ತಲುಪಿದ ಆದಿವಾಸಿ ಸಮುದಾಯಕ್ಕೆ ಸೇರಿದ ಮನೆಗೆಲಸದಾಕೆಯ ವಿಡಿಯೋವೊಂದು ದೇಶವನ್ನೇ ಬೆಚ್ಚಿಬೀಳಿಸಿದ ಬೆನ್ನಲೇ, ಬಿಜೆಪಿ ನಾಯಕಿ ಸೀಮಾ ಪಾತ್ರರನ್ನು ರಾಂಚಿ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಕೋರ್ಟಿಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಎಸ್‍ಸಿ/ಎಸ್‍ಟಿ ಕಾಯ್ದೆ ಪ್ರಕಾರ ಭಾರತ ದಂಡಸಂಹಿತೆಯ ಕಲಂನಡಿಯಲ್ಲಿ ಪಾತ್ರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ.
ಪಾತ್ರರ ಮನೆಯ ಕೆಲಸ ಮಾಡುವಾಗ ಎದುರಿಸಬೇಕಾಗಿ ಬಂದ ಕೆಟ್ಟ ಅನುಭವಗಳನ್ನು ಕೆಲಸದಾಕೆ ಸುನೀತಾ ವಿವರಿಸುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗಿತ್ತು. ಸೀಮಾ ಪಾತ್ರ ಕಬ್ಬಿಣದ ರಾಡ್‌ನಿಂದ ಕ್ರೂರವಾಗಿ ಹೊಡೆಯುತ್ತಿದ್ದರು, ತಿನ್ನಲು ಏನು ಕೊಡದೇ ಕೂಡಿಹಾಕಿದ್ದು ತನ್ನ ಮೂತ್ರವನ್ನೇ ತಾನು ಕುಡಿದು ಬದುಕಬೇಕಾದ ದಾರುಣ ಸ್ಥಿತಿಯ ಕುರಿತು ಸುನೀತಾ ವೀಡಿಯೊದಲ್ಲಿ ವಿವರಿಸುವುದು ವೈರಲ್ ಆಗಿತ್ತು.
ಕಾದ ಕಾವಲಿಯಿಂದ ಅವರನ್ನು ಸುಡಲಾಗಿತ್ತು, ಏಟಿನಿಂದಾಗಿ ಅವರ ಬಾಯಲ್ಲಿನ ಹಲ್ಲುಗಳು ಮುರಿದಿದ್ದವು. ಹತ್ತು ವರ್ಷ ಪಾತ್ರಳ ಮನೆಯಲ್ಲಿ ಉಳಿದುಕೊಂಡು ಕೆಲಸ ಮಾಡುತ್ತಿದ್ದೆ ಎಂದು ಸುನೀತಾ ತಿಳಿಸಿದರು. ಆಗಸ್ಟ್ 22ರಂದು ಸೀಮಾ ಪಾತ್ರಾರ ಮನೆಯಿಂದ ಪೊಲೀಸರು ಸುನೀತಾರನ್ನು ರಕ್ಷಿಸಿದ್ದರು. ವಿವಶ ಸ್ಥಿತಿಯಲ್ಲಿರುವ ಸುನೀತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾತ್ರ ವಿರುದ್ಧ ಪ್ರತಿಭಟನೆ ಜೋರಾಗಿದ್ದು, ನಂತರ ಬಿಜೆಪಿಯೂ ಪಕ್ಷದಿಂದ ಸೀಮಾರನ್ನು ಅಮಾನತುಗೊಳಿಸಿದೆ.
The #Adivasi woman victim clearly says she has been tortured & beaten by the shameless #BJP leader & wife of Rtd. IAS officer & Seema Patra for many days and finally burnt with Tawa. Why is this casteist lady not yet arrested??#AdivasiLivesMatter pic.twitter.com/uZ1fc3mCa9
— Goldy M George (PhD) (@goldymgeorge) August 29, 2022












