ರಾಷ್ಟ್ರೀಯ ಉದ್ಯಾನಗಳ ಸಾಕ್ಷ್ಯಚಿತ್ರ: ಮಾಜಿ ಅಧ್ಯಕ್ಷ ಬರಾಕ್ ಒಬಾಮಗೆ ಎಮ್ಮಿ ಪುರಸ್ಕಾರ

0
419

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮರಿಗೆ ಉತ್ತಮ ಹಿನ್ನೆಲೆ ವಿವರಣೆಗಾರರಿಗಿರುವ ಎಮ್ಮಿ ಪ್ರಶಸ್ತಿ ಲಭಿಸಿದೆ. ರಾಷ್ಟ್ರೀಯ ಉದ್ಯಾನಗಳ ಕುರಿತು ನೆಟ್‍ಪ್ಲಿಕ್ಸ್ ಪ್ರಸಾರ ಮಾಡಿದ ಅವರ್ ಗ್ರೇಟ್ ನ್ಯಾಶನಲ್ ಪಾರ್ಕ್ಸ್’ ಎಂಬ ಸಾಕ್ಷ್ಯಾಚಿತ್ರ ಸರಣಿಯ ವಿವರಣೆಗೆ ಈ ವರ್ಷದ ಎಮ್ಮಿ ಪ್ರಶಸ್ತಿಗೆ ಒಬಾಮ ಪಾತ್ರರಾದರು.

ಸರಣಿಯಲ್ಲಿ ವಿಶ್ವದ ರಾಷ್ಡ್ರೀಯ ಉದ್ಯಾನಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಎಮ್ಮಿ ಪ್ರಶಸ್ತಿಗೆ ಭಾಜನರಾದ ಎರಡನೇ ಅಮೆರಿಕನ್ ಅಧ್ಯಕ್ಷರಾಗಿ ಒಬಾಮ ದಾಖಲೆಗೆ ಸೇರ್ಪಡೆಯಾಗಿದ್ದಾರೆ.

2017ರಲ್ಲಿ ಅಧ್ಯಕ್ಷ ಸ್ಥಾನದಿಂದ ವಿರಮಿಸಿದ ಬಳಿಕ ಪತ್ನಿ ಮಿಶೆಲ್‍ರೊಂದಿಗೆ ಒಬಾಮ ಆರಂಭಿಸಿದ ಹಯರ್ ಗೌಂಡ್ ಎಂಬ ನಿರ್ಮಾಣ ಕಂಪೆನಿ ಅವರ್ ಗ್ರೇಟ್ ನ್ಯಾಶನಲ್ ಪಾರ್ಕ್ಸ್ ಸರಣಿಯ ಹಿಂದಿದೆ. ಡೆವಿಡ್ ಆಟ್ ಬರೊ, ಲುಪಿತ ನ್ಯೋಗೊ, ಕರೀಂ ಅದುಲ್ ಜಬ್ಬಾರ್ ಎಮ್ಮಿ ಪುರಸ್ಕಾರಕ್ಕೆ ಸ್ಪರ್ಧಾ ಕಣದಲ್ಲಿದ್ದರು. ಮಾಜಿ ಯುಎಸ್ ಅಧ್ಯಕ್ಷ ಡ್ವೈಟ್ ಐಸೆನ್‌ಹೋವರ್ ಕೂಡ ಎಮ್ಮಿ ಪ್ರಶಸ್ತಿಯನ್ನು ಪಡೆದಿದ್ದರು.