ಈ ಸಲ 25,000 ಹೆಚ್ಚುವರಿ ಹಜ್‍ಯಾತ್ರಿಕರಿಗೆ ಅವಕಾಶ: ಭಾರತದ ಯಾತ್ರಿಕರಲ್ಲಿ ಗರಿಕೆದರಿದ ನಿರೀಕ್ಷೆ

0
699

ಹೊಸದಿಲ್ಲಿ, ಫೆ. 22: ಭಾರತದ ಹಜ್ ಕೋಟಾ ಹೆಚ್ಚಳ ಭಾರತದ ಹಜ್ ಯಾತ್ರಿಕರಲ್ಲಿ ಸಂತೋಷಕ್ಕೆ ಕಾರಣವಾಗಿದೆ. ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ರ ಭಾರತ ಸಂದರ್ಶನದ ವೇಳೆ ಹಜ್ ಕೋಟಾವನ್ನು ಹೆಚ್ಚಿಸಲಾಗಿದ್ದು 25,000 ಹೆಚ್ಚು ಮಂದಿಗೆ ಈಸಲ ಹಜ್ ಯಾತ್ರೆ ಕೈಗೊಳ್ಳುವ ಸೌಲಭ್ಯ ಸಿಗಲಿದೆ. ಇಂಡಿಯನ್ ಹಜ್ ಮಿಶನ್‍ನ ಬಹುಕಾಲದ ಬೇಡಿಕೆ ರಾಜಕುಮಾರನ ಸಂದರ್ಶನದಲ್ಲಿ ಈಡೇರಿದೆ.

ಈ ವರ್ಷದಿಂದಲೇ ಹಜ್ ಕೋಟಾದಲ್ಲಿ ಹೆಚ್ಚಳವಾಗಿರುವುದು ಹಜ್ ಯಾತ್ರಿಕರಲ್ಲಿ ಸಂತೋಷ ಮೂಡಿಸಿದೆ. ಭಾರತ ಮುಸ್ಲಿಮರ ಜನಸಂಖ್ಯೆಯ ಅನುಪಾತಕ್ಕೆ ಸರಿಯಾಗಿ ಕೋಟಾವನ್ನು ಹೆಚ್ಚಿಸಬೇಕೆಂದು ಭಾರತ ಸೌದಿ ಅರೇಬಿಯವನ್ನು ಕೋರಿತ್ತು. ಭಾರತದಿಂದ ಈಸಲ ಒಟ್ಟು ಮೂರು ಲಕ್ಷ ಮಂದಿ ಹಜ್‍ಯಾತ್ರೆಗೆ ಅರ್ಜಿಸಲ್ಲಿಸಿದ್ದಾರೆ. ಈ ಹಿಂದೆ 1,75,000 ಮಂದಿಗೆ ಹಜ್ ಯಾತ್ರೆಗೆ ಅವಕಾಶ ದೊರಕಿತ್ತು. ಈ ಬಾರಿ ಸುಮಾರು ಎರಡು ಲಕ್ಷ ಮಂದಿಗೆ ಹಜ್ ಯಾತ್ರೆ ಮಾಡುವ ಅವಕಾಶ ಸಿಗುವ ನಿರೀಕ್ಷೆಯಿದೆ.