ವಕೀಲನಿಂದ ನ್ಯಾಯಾಧೀಶರಿಗೆ ಹಲ್ಲೆ! ವೀಡಿಯೊ ವೈರಲ್

0
1550

ಕರಾಚಿ,ಫೆ.22: ಪಾಕಿಸ್ತಾನದಲ್ಲಿ ಜ್ಯೂಡಿಶಿಯಲ್ ಮ್ಯಾಜಿಸ್ಟ್ರೇಟ್‍ರಿಗೆ ಹಲ್ಲೆ ಎಸಗಿದ ನ್ಯಾಯವಾದಿಯ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ. ಲಾಹೋರಿನ ವಕೀಲ ಮಿಯಾ ಝೀಶನ್ ಎಂಬಾತ ಜ್ಯೂಡಿಶಿಯಲ್ ಮ್ಯಾಜಿಸ್ಟ್ರೇಟ್ ಹಮೀದುರ್ ರಹ್ಮಾನ್‍ರಿಗೆ ಲಾಹೋರಿನ ಕಂಟ್ ಕೋರ್ಟಿನ ಮುಂದೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ಎಸಗಿದ ಘಟನೆಯು ಸಿಸಿಟಿವಿಯಲ್ಲಿ ದಾಖಲಾಗಿದ್ದು ಇದೀಗ ವೈರಲ್ ಆಗಿದೆ.

ಎರಡು ದಿವಸಗಳಿಂದ ಕೆಳಕೋರ್ಟಿನ ನ್ಯಾಯಾಧೀಶರುಗಳು ಒಟ್ಟು ಸೇರಿ ಘಟನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲ್ಲೆಕೋರ ವಕೀಲನನ್ನು ಲಾಹೋರಿನ ಬಾರ್ ಅಸೋಸಿಯೇಶನ್ ಸದಸ್ಯತತನದಿಂದ ವಜಾಗೊಳಿಸಿದೆ. ಪಾಕಿಸ್ತಾನ ದಂಡ ಸಹಿತೆ 406 ಪ್ರಕಾರ ಮತ್ತು ನಂಬಿಕೆ ವಂಚನೆ ಅಪರಾಧದಡಿಯಲ್ಲಿ ದಾಖಲಾದ ಪ್ರಕರಣದಲ್ಲಿನ ಶಂಕಿತ ಆರೋಪಿಗೆ ಜಾಮೀನು ಮಂಜೂರು ಮಾಡಿಸಲು ವಕೀಲ ಝೀಶನ್ ಬಯಸುತ್ತಿದ್ದ. ಆದರೆ ಪ್ರಕರಣದ ವಿಚಾರಣೆಯನ್ನು ಮ್ಯಾಜಿಸ್ಟ್ರೇಟ್ ಮುಂದೂಡಿದ್ದರು. ಇದಕ್ಕೆ ಕೋಪತಪ್ತನಾದ ವಕೀಲ ಝೀಝಾನ್ ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸಿದ್ದಾನೆ.

ವಕೀಲ ಮಿಯಾನ್ ಝೀಶನ್ ಮ್ಯಾಜಿಸ್ಟ್ರೇಟ್‍ರಿಗೆ ಕೋರ್ಟಿನ ಬಾಗಿಲ ಬಳಿ ಹಲ್ಲೆ ನಡೆಸಿ ತಳ್ಳುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ದುಂಡಾವರ್ತಿ ನಡೆಸಿದ ವಕೀಲನ ವಿರುದ್ಧ ಮ್ಯಾಜಿಸ್ಟ್ರೇಟ್‍ರ ಸ್ಟೆನೊಗ್ರಾಫರ್ ಕಂಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ವಕೀಲ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾನೂನಿ ನಡಿಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಡಿಯೋ ಕೃಪೆ: ಸಮಾ ಟಿವಿ