ಉತ್ತರಪ್ರದೇಶದಲ್ಲಿ ಎಟಿಎಸ್ ಕಾರ್ಯಾಚರಣೆ: ವಿದ್ಯಾರ್ಥಿಗಳ ಸೋಗಿನಲ್ಲಿದ್ದ ಇಬ್ಬರು ಜೈಶ್ ಉಗ್ರರ ಸಹಿತ 12 ಶಂಕಿತರ ಬಂಧನ

0
838

ಲಕ್ನೋ,ಫೆ. 22: ಉತ್ತರ ಪ್ರದೇಶದ ಭಯೋತ್ಪಾದನಾ ವಿರೋಧಿ ದಳ ಎಟಿಎಸ್ ಜೈಷೆ ಮುಹಮ್ಮದ್‍ನ ಇಬ್ಬರು ಭಯೋತ್ಪಾದಕರ ಸಹಿತ 12 ಶಂಕಿತ ಆರೋಪಿಗಳನ್ನು ಬಂಧಿಸಿದೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಉತ್ತರಪ್ರದೇಶ ಡಿಜಿಪಿ ಪ್ರಕಾಶ್ ಸಿಂಗ್ ದೇವ್‍ಬಂದ್‍ನಲ್ಲಿ ಜೈಷೆ ಮುಹಮ್ಮದ್‍ನ ಇಬ್ಬರು ಭಯೋತ್ಪಾದಕರು ವಿದ್ಯಾರ್ಥಿಗಳ ಸೋಗಿನಲ್ಲಿದ್ದಾರೆ ಎಂದು ಮಾಹಿತಿ ಲಭಿಸಿತ್ತು. ಇವರ ಚಟುವಟಿಕೆಗಳ ನಾಗರಿಕರಲ್ಲಿ ಅವರ ಕುರಿತು ವಿಚಾರಿಸಿದಾಗ ಸಂದೇಹ ಬಲವಾಯಿತು. ನಿನ್ನೆ ಸಂಜೆ ಎಟಿಎಸ್‍ನ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಇಬ್ಬರನ್ನು ಬಂಧಿಸಿದರು ಎಂದು ತಿಳಿಸಿದರು.
ಭಯೋತ್ಪಾದಕರಲ್ಲಿ ಶಹನಾಝ್ ಜಮ್ಮು ಕಾಶ್ಮೀರದವನು ಮತ್ತು ಅವನ ಸಂಗಡಿಗ ಅಕಿಬ್ ಅಹ್ಮದ್ ಪುಲ್ವಾಮದವನು ಎಂದು ತಿಳಿಸಿದರು. ಇವರ ಬಳಿ ಕೆಲವು ಆಯುಧಗಳು, ಮೊಬೈಲ್‍ನಲ್ಲಿದ್ದ ವೀಡಿಯೋ ಹಾಗೂ ಕೆಲವು ಫೋಟೊಗಳು ವಶಪಡಿಸಿಕೊಳ್ಳಲಾಗಿದೆ.
ಇರಿಬ್ಬರು ತಮ್ಮ ಸಂಘಟನೆಗೆ ಯುವಕರನ್ನು ಸೇರಿಸಲು ಉತ್ತರ ಪ್ರದೇಶಕ್ಕೆ ಬಂದಿದ್ದರು. ಶಹನಾಜ್ ಬಾಂಬು ತಯಾರಿಸುವುದರಲ್ಲಿ ನಿಷ್ಣಾತನಾಗಿದ್ದಾನೆ. ಜೋತೆಗೆ ಭಯೋತ್ಪಾದನೆಗೆ ತರಬೇತಿ ನೀಡುತ್ತಿದ್ದ. ಉಳಿದ ಶಂಕಿತ ಆರೋಪಿಗಳ ವಯಸ್ಸು 20ರಿಂದ 25 ವರ್ಷದೊಳಗಿವರು ಎಂದು ಡಿಜಿಪಿ ತಿಳಿಸಿದರು.

ಈಗ ಈ ಇಬ್ಬರು ಯುವಕರು ತಮ್ಮ ಸಂಘಟನೆ ಎಷ್ಟು ಯುವಕರನ್ನು ಸೇರಿಸಿದ್ದಾರೆ, ಇವರ ಗುರಿಯೇನಾಗಿತ್ತು. ಪೂಲ್ವಾಮದಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಇವರ ಪಾತ್ರವೇನಿತ್ತು ಎಂದು ತನಿಖೆ ನಡೆಯುತ್ತಿದ್ದು ಇವರಿಗೆ ಹಣಕಾಸು ನೆರವು ಯಾರು ನೀಡುತ್ತಿದ್ದರು ಎಂದು ಕೂಡ ತನಿಖೆ ನಡೆಯುತ್ತಿದೆ ಎಂದು ಡಿಜಿಪಿ ಹೇಳಿದರು. ಶಹಜಾನ್‍ನ ನೀಡಿದ ವಿವರಗಳ ಆಧಾರದಲ್ಲಿ ಸಹಾರನಪುರ, ಮುಝಪ್ಫರ್‍ಪುರ ಮತ್ತು ಮೀರತ್ ಸಹಿತ ಹಲವು ಕಡೆಗಳಲ್ಲಿ ಎಟಿಎಸ್ ದಾಳಿ ಮಾಡಿದೆ. ಹಲವಾರು ಶಂಕಿತರನ್ನು ಬಂಧಿಸಲಾಗಿದ್ದು ಎಲ್ಲರನ್ನೂ ವಿಚಾರಣೆಗೆ ಗುರಿಪಡಿಸಲಾಗುತ್ತಿದೆ.