ಮಧ್ಯಪ್ರದೇಶ,ಫೆ. 25: ಪೊಲೀಸರ ಕರ್ತವ್ಯ ನಿರ್ವಹಣೆಯ ಉತ್ಕೃಷ್ಟ ಮಾದರಿಯೊಂದು ಮಧ್ಯಪ್ರದೇಶದಿಂದ ವರದಿಯಾಗಿದೆ. ಚಲಿಸುತ್ತಿರುವ ರೈಲಿನಿಂದ ಕೆಳಗೆ ಬಿದ್ದು ರೈಲು ಪಟ್ಟಿಯ ಬಳಿ ನೋವಿನಿಂದ ನರಳುತ್ತಿದ್ದ ಪ್ರಯಾಣಿಕನನ್ನು ಕರ್ತವ್ಯ ನಿರತ ಪೊಲೀಸ್ ಒಬ್ಬರು ಎತ್ತಿಕೊಂಡು ಒಂದೂವರೆ ಕಿಲೊಮೀಟರ್ ದೂರದಲ್ಲಿರುವ ರೈಲ್ವೆ ಸ್ಟೇಶನ್ಗೆ ಓಡುತ್ತಾ ತಲುಪಿಸುವ ಮೂಲಕ ಚಿಕಿತ್ಸೆ ನೀಡಲು ನೆರವಾಗಿದ್ದಾರೆ. ಗಾಯಾಳು ಪ್ರಯಾಣಿಕ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾನೆ.
#WATCH: Police constable Poonam Billore ran for more than a kilometer along the railway tracks with an injured man on his shoulders in Hoshangabad today, after the ambulance couldn't reach the spot to rescue the man who had fell down from a train. #MadhyaPradesh pic.twitter.com/SqpdjgBZnd
— ANI (@ANI) February 23, 2019
ಮಧ್ಯಪ್ರದೇಶದ ಹೋಶಂಗಾಬಾದ್ನಲ್ಲಿ ಘಟನೆ ನಡೆದಿದೆ. ರೈಲ್ವೆ ನಿಲ್ದಾಣಕ್ಕೆ ಒಂದೂವರೆ ಕಿಲೋಮೀಟರ್ ದೂರದಲ್ಲಿ ಚಲಿಸುತ್ತಿರುವ ರೈಲಿನಿಂದ ಪ್ರಯಾಣಿಕರೊಬ್ಬರು ಕೆಳಗೆ ಬಿದ್ದರು. ಪೊಲೀಸ್ ಕಾನ್ಸ್ಟೇಬಲ್ ಗೆ ಒಬ್ಬರು ರೈಲಿನಿಂದ ಕೆಳಗೆ ಬಿದ್ದಿದ್ದಾರೆ ಎಂದು ತಿಳಿಯಿತು. ಕೂಡಲೇ ಅಲ್ಲಿಗೆ ಧಾವಿಸಿದ ಪೂನಂ ಬಿಲ್ಲಾರ್ ಎಂಬ ಪೊಲೀಸ್ ಕಾನ್ಸ್ಟೇಬಲ್ ಪ್ರಯಾಣಿಕನನ್ನು ಹೆಗಲ ಮೇಲೇರಿಸಿ ಓಡತೊಡಗಿದರು.
ಬಿದ್ದ ಸ್ಥಳ ರೈಲುಗೇಟಿನಿಂದ ದೂರವಿತ್ತು. ಆದ್ದರಿಂದ ಆಂಬ್ಯುಲೆನ್ಸ್ ಕೂಡ ಲಭ್ಯವಿರಲಿಲ್ಲ. ಗಾಯಾಳುವನ್ನು ಕರೆದೊಯ್ಯಲು ಬೇರೆ ಉಪಾಯವಿಲ್ಲ ಎಂದು ಮನವರಿಕೆಯಾದಾಗ ಪೂನಂ ಬಿಲ್ಲಾರ್ ಆತನನ್ನು ಹೆಗಲಿಗೆ ಹಾಕಿ ರೈಲ್ವೆ ಟ್ರಾಕ್ ನಲ್ಲಿ ಓಡಿ ಹೊಶಂಗಾಬಾದ್ ರೈಲ್ವೆ ನಿಲ್ದಾಣಕ್ಕೆ ತಂದಿದ್ದಾರೆ. ನಂತರ ಹೆಲ್ತ್ ಸೆಂಟರಿನಲ್ಲಿ ಗಾಯಾಳುವಿಗೆ ಚಿಕಿತ್ಸೆ ನೀಡಲಾಗಿದೆ. ಆತ ಚೇತರಿಸುತ್ತಿದ್ದಾನೆ ಎಂದು ವರದಿಯಾಗಿದೆ.












