ಸನ್ಮಾರ್ಗ ವಾರ್ತೆ
ನವದೆಹಲಿ: ಅಕ್ಟೋಬರ್ 30 ರಂದು ಸಂಜೆ ಸಂಭವಿಸಿದ ಮೋರ್ಬಿ ಸೇತುವೆ ಕುಸಿತ ದುರಂತದಲ್ಲಿ ಇದುವರೆಗೆ 134 ಮಂದಿ ಮೃತಪಟ್ಟಿದ್ದಾರೆ. ಮಂಗಳವಾರ, ನೌಕಾಪಡೆ ಮತ್ತು ಎನ್‌ಡಿಆರ್‌ಎಫ್ ತಂಡಗಳು ಮತ್ತೆ ಮೃತ ದೇಹಗಳಿಗಾಗಿ ಹುಡುಕಾಟ ಆರಂಭಿಸಿವೆ.
ಈ ನಡುವೆ ಗುಜರಾತ್‌ನಲ್ಲಿ ಬುಧವಾರ ಒಂದು ದಿನದ ಶೋಕಾಚರಣೆ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು ಮೋರ್ಬಿಯಲ್ಲಿ ಮೃತರ ಕುಟುಂಬಗಳು ಮತ್ತು ಗಾಯಾಳುಗಳನ್ನು ಭೇಟಿಯಾಗಲಿದ್ದಾರೆ.
ಆದರೆ, ಮೋದಿಯವರು ಮೋರ್ಬಿಗೆ ಭೇಟಿ ನೀಡುವ ಮೊದಲು ಸಿವಿಲ್ ಆಸ್ಪತ್ರೆಗೆ ರಾತ್ರೋರಾತ್ರಿ ಸುಣ್ಣ-ಬಣ್ಣ ಬಳಿದು ದುರಸ್ತಿ ಮಾಡಲಾಗಿದೆ. ರೋಗಿಗಳ ವಾರ್ಡ್‌ಗಳಲ್ಲಿ ಹೊಸ ಬೆಡ್‌ಗಳು ಮತ್ತು ವಾಟರ್ ಕೂಲರ್‌ಗಳನ್ನು ಸಹ ಅಳವಡಿಸಲಾಗಿದೆ. ನಿನ್ನೆ ಇದೇ ಆಸ್ಪತ್ರೆಗೆ 100 ಶವಗಳನ್ನು ತರಲಾಗಿತ್ತು.
ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಆಸ್ಪತ್ರೆಗಳ ದುರಸ್ತಿ ವಿಚಾರದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದು, “ಪ್ರಧಾನಿಯವರ ಫೋಟೋಶೂಟ್ ಮಾಡಲು ಬಿಜೆಪಿ ಈವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ತೊಡಗಿದೆ” ಎಂದು ಟೀಕಿಸಿವೆ.
“ನಾಳೆ ಪ್ರಧಾನಿ ಮೋದಿ ಅವರು ಮೋರ್ಬಿಯ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮುನ್ನ ಅಲ್ಲಿ ಸುಣ್ಣ ಬಳಿಯುವ, ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ. ಹೊಳೆಯುವ ಟೈಲ್ಸ್ ಅಳವಡಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರ ಚಿತ್ರಗಳಲ್ಲಿ ಯಾವುದೇ ಕೊರತೆ ಇರಬಾರದು, ಅದಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇವರಿಗೆ ನಾಚಿಕೆಯಾಗುವುದಿಲ್ಲವೇ! ಎಷ್ಟೋ ಜನರು ಜೀವ ಕಳೆದುಕೊಂಡಿದ್ದಾರೆ ಆದರೆ, ಇವರು ಈವೆಂಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ಕಾಂಗ್ರೆಸ್ ಆಸ್ಪತ್ರೆಯ ಚಿತ್ರಗಳನ್ನು ಹಂಚಿಕೊಂಡು ಟ್ವೀಟ್ ಮಾಡಿದೆ.
त्रासदी का इवेंट
कल PM मोदी मोरबी के सिविल अस्पताल जाएंगे। उससे पहले वहां रंगाई-पुताई का काम चल रहा है। चमचमाती टाइल्स लगाई जा रही हैं।
PM मोदी की तस्वीर में कोई कमी न रहे, इसका सारा प्रबंध हो रहा है।
इन्हें शर्म नहीं आती! इतने लोग मर गए और ये इवेंटबाजी में लगे हैं। pic.twitter.com/MHYAUsfaoC
— Congress (@INCIndia) October 31, 2022












