ಸನ್ಮಾರ್ಗ ವಾರ್ತೆ
ಜಗತ್ತಿನ ಅತಿ ದೊಡ್ಡ ಪುಸ್ತಕ ಮೇಳಗಳಲ್ಲಿ ಒಂದಾಗಿರುವ ಶಾರ್ಜಾ ಪುಸ್ತಕ ಮೇಳ ನವೆಂಬರ್ 2ರಂದು ಆರಂಭವಾಗಲಿದ್ದು ನವಂಬರ್ 13ರವರೆಗೆ ಪುಸ್ತಕ ಪ್ರಿಯರನ್ನು ಸ್ವಾಗತಿಸಲಿದೆ. ಈ ಪುಸ್ತಕ ಮೇಳದಲ್ಲಿ ಶಾಂತಿ ಪ್ರಕಾಶನ ಮಂಗಳೂರು ಇದರ ಮಳಿಗೆಯೂ ಇರಲಿದೆ. ಕನ್ನಡಿಗರನ್ನು ಆಕರ್ಷಿಸುವ ಕನ್ನಡದ ಏಕೈಕ ಮಳಿಗೆ ಇದಾಗಿದ್ದು, ಕಳೆದ ಕೆಲವು ವರ್ಷಗಳಿಂದ ಶಾಂತಿ ಪ್ರಕಾಶನ ತನ್ನ ಮಳಿಗೆಯನ್ನು ಶಾರ್ಜಾ ಪುಸ್ತಕ ಮೇಳದಲ್ಲಿ ತೆರೆದಿಡುತ್ತಾ ಬಂದಿದೆ.
ಇದು 41ನೇ ಪುಸ್ತಕ ಮೇಳವಾಗಿದ್ದು ನೂರಾರು ಪ್ರಕಾಶನ ಸಂಸ್ಥೆಗಳು ತಮ್ಮ ಪುಸ್ತಕಗಳನ್ನು ಇಲ್ಲಿ ಮಾರಾಟಕ್ಕೆ ಇಡುತ್ತವೆ. ಯುಎಇ ಸಹಿತ ಜಗತ್ತಿನಾದ್ಯಂತದ ಪ್ರಕಾಶನ ಸಂಸ್ಥೆಗಳ ಪುಸ್ತಕಗಳು ಈ ಮಳಿಗೆಯಲ್ಲಿ ದೊರೆಯುತ್ತವೆ.
ಶಾಂತಿ ಪ್ರಕಾಶನ ಕಳೆದ ಕೆಲವಾರು ವರ್ಷಗಳಿಂದ ತನ್ನ ಮಳಿಗೆಯನ್ನು ಈ ಮೇಳದಲ್ಲಿ ಇಡುತ್ತಿದ್ದು ಕನ್ನಡಿಗರನ್ನು ಆಕರ್ಷಿಸುತ್ತಿದೆ. ನಂಬರ್ 2ರಿಂದ 13ರವರೆಗಿನ ಈ ಪುಸ್ತಕ ಮೇಳದಲ್ಲಿ ಗಲ್ಫ್ ಕನ್ನಡಿಗರು ಶಾಂತಿ ಪ್ರಕಾಶನದ ಮಳಿಗೆಗೆ ಭೇಟಿ ಕೊಟ್ಟು ಬೆಂಬಲಿಸಬೇಕು ಎಂದು ಸಂಘಟಕರು ಕೋರಿದ್ದಾರೆ.













