ಸನ್ಮಾರ್ಗ ವಾರ್ತೆ
ಕಲ್ಲಡ್ಕ: ಇಲ್ಲಿನ ಗೋಳ್ತಮಜಲುನಲ್ಲಿರುವ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಸೀರತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅನುಪಮಾ ಮಹಿಳಾ ಮಾಸಿಕದ ಉಪಸಂಪಾದಕಿ ಸಬೀಹಾ ಫಾತಿಮಾರವರು ಕುರ್ಆನ್ ಮತ್ತು ಪ್ರವಾದಿ ಮಹಮ್ಮದ್(ಸ)ರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಹೇಮಲತಾ ಬಿ.ಡಿ., ಉಪ ಪ್ರಾಂಶುಪಾಲರಾದ ಮಮಿತಾ ಎಸ್.ರೈ, ಮೌಲ್ಯ ಶಿಕ್ಷಣ ವಿಭಾಗದ ಉಪನ್ಯಾಸಕಿ ಸಲೀಮಾರವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸಫ್ರತ್ ಕಿರಾಅತ್ ಪಠಿಸಿದರು, ರಿಷಾ ಸ್ವಾಗತಿಸಿದರು, ಅಮೀನತ್ ಸಾಯಿಸ್ತಾ ಧನ್ಯವಾದವಿತ್ತರು. ಫಾತಿಮಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.












