ವಾಷಿಂಗ್ಟನ್,ಫೆ.28: ಪಾಕಿಸ್ತಾನದ ವಶದಲ್ಲಿರುವ ಭಾರತದ ವಾಯುಸೇನೆಯ ಪೈಲಟ್ರನ್ನು ಬಿಡುಗಡೆಗೊಳಿಸಬೇಕೆಂದು ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಝುಲ್ಫಿಕರ್ ಅಲಿ ಭುಟ್ಟೊರ ಮೊಮ್ಮಗಳು ಮತ್ತು ಲೇಖಕಿ ಫಾತಿಮಾ ಭುಟ್ಟೋ ಹೇಳಿದ್ದಾರೆ.
ಕಳೆದ ದಿವಸ ಪಾಕಿಸ್ತಾನ ಗುಂಡುಹಾರಿಸಿ ಉರುಳಿಸಿದ ಭಾರತದ ಮಿಗ್21ನಿಂದ ಸುರಕ್ಷಿತವಾಗಿ ಹೊರಬಂದ ಪೈಲಟ್ ಅಭಿನಂದನ್ ವರ್ಧಮಾನ್ರನ್ನು ಪಾಕ್ ಸೈನ್ಯ ಬಂಧಿಸಿತ್ತು. ಪೈಲಟ್ರನ್ನು ಸುರಕ್ಷಿತವಾಗಿ ಮರಳಿಸಬೇಕೆಂದು ಭಾರತ ಆಗ್ರಹಿಸಿತ್ತು. “ದೇಶದ ಕಸ್ಟಡಿಯಲ್ಲಿರುವ ಭಾರತದ ಪೈಲಟ್ರನ್ನು ಬಿಡುಗಡೆಗೊಳಿಸಬೇಕು.
ಈ ರೀತಿ ಶಾಂತಿ ಮತ್ತು ಮಾನವೀಯತೆ ಹಾಗೂ ಗೌರವ ರಕ್ಷಿಸುವ ನಮ್ಮ ಪ್ರಮಾಣಿಕತೆಯನ್ನು ಸಾಬೀತುಪಡಿಸಬೇಕು ಎಂದು ತನ್ನ ಸಹಿತ ಹಲವಾರು ಪಾಕಿಸ್ತಾನದ ಯುವ ತಲೆಮಾರು ಬಯುಸುತ್ತೇವೆ” ಎಂದು ಫಾತಿಮಾ ಭುಟ್ಟೊ ಹೇಳಿದರು.












