ಮದ್ರಸಗಳ ಆದಾಯ ಮೂಲ ಹುಡುಕಲು ಹೊರಟ ಯುಪಿ ಸರಕಾರ

0
290

ಸನ್ಮಾರ್ಗ ವಾರ್ತೆ

ಲಕ್ನೊ: ಸಮೀಕ್ಷೆ ನಡೆಸಿದ ಬಳಿಕ ಉತ್ತರ ಪ್ರದೇಶದ ಗಡಿ ಜಿಲ್ಲೆಗಳಲ್ಲಿ ಇರುವ ಸರಕಾರದ ಅನುಮೋದನೆ ಇಲ್ಲದ ಮದ್ರಸಗಳ ವರಮಾನದ ಕುರಿತು ತನಿಖೆ ನಡೆಸಲು ಉತ್ತರ ಪ್ರದೇಶ ಸರಕಾರ ನಿರ್ಧರಿಸಿದ್ದಾಗಿ ವರದಿಯಾಗಿದೆ.

ಈ ಹಿಂದೆ ಇದೇ ಸರಕಾರ ನಡೆಸಿದ ಸಮೀಕ್ಷೆಯಲ್ಲಿ ಬಹುತೇಕ ಮದ್ರಸಗಳು ತಮ್ಮ ವರಮಾನ ಮಾರ್ಗ ‘ಝಕಾತ್’ ಆಗಿದೆ ಎಂದು ಘೋಷಿಸಿದ್ದವು. 1500ಕ್ಕೂ ಹೆಚ್ಚು ಮದ್ರಸಗಳಿಗೆ ಈ ‘ಝಕಾತ್’ ಎಲ್ಲಿಂದ ಸಿಗುತ್ತದೆ ಎಂದು ಪತ್ತೆ ಹಚ್ಚುವ ಕಾರ್ಯಕ್ಕೆ ಸರಕಾರ ಇಳಿದಿದೆ.

ವಿಶೇಷವಾಗಿ ನೇಪಾಳದ ಗಡಿಯಲ್ಲಿರುವ ಉತ್ತರ ಪ್ರದೇಶ ಜಿಲ್ಲೆಗಳ ಮದ್ರಸಗಳ ಆದಾಯದ ಕುರಿತು ತನಿಖಾ ವರದಿ ತಯಾರಿಸಲು ಮುಂದಡಿ ಇರಿಸಿದ್ದು, ಇದರ ಜೊತೆಗೆ ಮದ್ರಸಗಳ ಆದಾಯದ ಸಮೀಕ್ಷೆ ಕೂಡ ನಡೆಸುವುದು ಯೋಗಿ ಸರಕಾರದ ತೀರ್ಮಾನ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಹಸಚಿವ ಡ್ಯಾನಿಶ್ ಆಝಾದ್ ಅನ್ಸಾರಿ ತಿಳಿಸಿದರು.

ಮದ್ರಸದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಹಾಗೂ ನೌಕರರಿಗೆ ವೇತನ ಎಲ್ಲಿಂದ ಕೊಡುತ್ತಾರೆ ಎಂಬುದರ ಬಗ್ಗೆ ಮದ್ರಸ ಸಮೀಕ್ಷೆಯಲ್ಲಿಯೇ 11 ಅಂಶಗಳ ಪ್ರಶ್ನೆ ಕೇಳಲಾಗಿದ್ದು, ಆದಾಯ ಎಲ್ಲಿಂದ ಬರುತ್ತದೆ ಎಂದು ಪ್ರತ್ಯೇಕವಾಗಿ ತನಿಖೆ ನಡೆಸುವ ಅಗತ್ಯವಿಲ್ಲ. ಸಮೀಕ್ಷೆ ನಡೆಸುವುದು ರಾಜ್ಯ ಸರಕಾರದ ತೀರ್ಮಾನವಾಗಿದ್ದು ಅದರಲ್ಲಿ ಮದ್ರಸಗಳ ವರಮಾನ ತನಿಖೆ ಕೂಡ ಸೇರಿದೆ ಎಂದು ಸಚಿವರು ತಿಳಿಸಿದ್ದಾರೆ.