ಫೆಬ್ರುವರಿ 22ರಿಂದ ಮಸ್ಕತ್ ಅಂತಾರಾಷ್ಟ್ರೀಯ ಪುಸ್ತಕ ಮೇಳ

0
66

ಸನ್ಮಾರ್ಗ ವಾರ್ತೆ

ಮಸ್ಕತ್: ಮಸ್ಕತ್ ಅಂತಾರಾಷ್ಟ್ರೀಯ ಪುಸ್ತಕ ಮೇಳ ಮುಂದಿನ ವರ್ಷ ಫೆಬ್ರುವರಿ 22 ರಿಂದ  ಮಾರ್ಚ್ 4ರವೆರೆಗೆ ನಡೆಯಲಿದೆ ಎಂದು ವಾರ್ತಾ ಸಚಿವಾಲಯ ತಿಳಿಸಿದೆ. ಈ ಬಾರಿ ಮತ್ತಷ್ಟು ಹೊಸತನದೊಂದಿಗೆ ಪುಸ್ತಕ ಮೇಳ ನಡೆಯಲಿದ್ದು ಅದಕ್ಕಾಗಿ ಪೂರ್ವ ಸಿದ್ಧತೆ ಆರಂಭವಾಗಿದೆ ಎಂದು ಮಾಜಿ ವಾರ್ತಾ ಸಚಿವ ಡಾ. ಅಬ್ದುಲ್ಲಾಹ್ ಬಿನ್ ನಾಸಿರ್ ಅಲ್ ಹರ್ರಾಸಿ ತಿಳಿಸಿದರು.

ಕೊರೋನ ಉಪಶಮನದ ಬಳಿಕ ಪುಸ್ತಕ ಮೇಳವನ್ನು ವಿಸ್ತರಿಸಲು ಸರಕಾರ ನಿರ್ಧರಿಸಿದ್ದು,  ಓದುಗರು ಮತ್ತು ಪ್ರಕಾಶಕರಿಂದಲೂ ಬಹಳಷ್ಟು ಬೆಂಬಲ ಲಭಿಸಿದೆ. ಅರೇಬಿಕ್, ಇಂಗ್ಲಿಷ್ ಸಹಿತ ವಿವಿಧ ಭಾಷೆಗಳ ಪುಸ್ತಕಗಳು ಈ ಸಲ ಪ್ರದರ್ಶನಕ್ಕಿರಿಸಲಾಗುವುದು. ಇತಿಹಾಸ, ಸಾಹಿತ್ಯ, ಕಥೆ, ಕವಿತೆ, ಸಂಸ್ಕೃತಿ ಹಾಗೂ ಧಾರ್ಮಿಕ ಪುಸ್ತಕಗಳು ಪುಸ್ತಕ ಮೇಳದಲ್ಲಿ ಇರಲಿವೆ.  ಸಾಹಿತಿಗಳು ಹಾಗೂ ಲೇಖಕರು ಭಾಗವಹಿಸುವ ಸಂವಾದ ಕಾರ್ಯಕ್ರಮಗಳು, ಬರಹಗಾರರ ಸಂಗಮ ಸೇರಿದಂತೆ ಹೊಸ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಗಳೂ ಕೂಡ ಪುಸ್ತಕ ಮೇಳದಲ್ಲಿ ನಡೆಯಲಿದೆ.