ಭಾರತದ ವಾಯು ಸೇನೆಯ ಕಮಾಂಡರ್ ಅಭಿನಂದನ್ ವರ್ಧಮಾನ್ ವಾಘ ಗಡಿಗೆ

0
734

ಹೊಸದಿಲ್ಲಿ: ಪಾಕ್ ಕಸ್ಟಡಿಯಲ್ಲಿರುವ ವಾಯು ಸೇನೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‍ರನ್ನು ವಾಘ ಗಡಿಗೆ ತರಲಾಗಿದೆ. ಪಾಕಿಸ್ತಾನದ ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಅಭಿನಂದನ್‍ರನ್ನು ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ. ಆದರೆ, ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮವನ್ನು ಕೈಬಿಟ್ಟಿದೆ. ಏರ್‍ವೇಸ್ ಮಾರ್ಶಲ್ ಆರ್‍ಜಿಕೆ ಕಪೂರ್, ಶ್ರೀಕುಮಾರ್ ಪ್ರಭಾಕರನ್ ಅಭಿನಂದನ್‍ರನ್ನು ಸ್ವಾಗತಿಸಲಿದ್ದಾರೆ. ರೆಡ್‍ಕ್ರಾಸ್ ಕ್ರಮದ ನಂತರ ಪಾಕಿಸ್ತಾನ ಯೋಧನನ್ನು ಭಾರತಕ್ಕೆ ಹಸ್ತಾಂತರಿಸಲಿದೆ.

ಭಾರೀ ಸುರಕ್ಷೆಯಲ್ಲಿ ಅಭಿನಂದನ್‍ರನ್ನು ಭಾರತಕ್ಕೆ ಹಸ್ತಾಂತರಿಸಲು ವಾಘಕ್ಕೆ ಕರೆತರಲಾಗಿದೆ. ಅಭಿನಂದನ್ ಭಾರತಕ್ಕೆ ಹಸ್ತಾಂತರಿಸಿದ ಕೂಡಲ್ ಏರ್‍ಪೋರ್ಸ್ ಇಂಟಲಿಜೆನ್ಸ್ ಯುನಿಟ್‍ಗೆ ಕರೆದುಕೊಂಡು ಹೋಗಲಾಗುತ್ತದೆ. ಆರೋಗ್ಯವನ್ನು ಪರೀಕ್ಷಿಸಲು ಸ್ಕಾನಿಂಗ್ ಸಹಿತ ವೈದ್ಯಕೀಯ ಪರಿಶೋಧನೆ ನಡೆಯಲಿದೆ. ಈ ನಡುವೆ ಜಮ್ಮು ಕಾಶ್ಮೀರದ ನೌಶೇರದಲ್ಲಿ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿದ್ದು ಭಾರತೀಯ ಸೇನೆ ಪ್ರತಿದಾಳಿ ನಡೆಸಿದೆ.

ಅಭಿನಂದನ್‍ರನ್ನು ಮರಳಿ ಕರೆತರಲು ವಿಶೇಷ ವಿಮಾನ ಕಳುಹಿಸಬೇಕೆಂದು ಭಾರತ ಹೇಳಿದ್ದರೂ ಪಾಕಿಸ್ತಾನ ಇದನ್ನು ನಿರಾಕರಿಸಿದೆ. ವಾಯುಸೇನೆ ಕಮಾಂಡರನ್ನು ಮಧ್ಯಾಹ್ನ ಎರಡು ಗಂಟೆಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಲಾಗಿದ್ದರೂ ಅದು ವಿಳಂಬಗೊಂಡಿದೆ.

ಅಭಿನಂದನ್‍ರನ್ನು ಸ್ವಾಗತಿಸಲು ವಾಯುಸೇನೆಯ ಉನ್ನತ ಅಧಿಕಾರಿಗಲೂ, ತಂದೆ ತಾಯಿ ಹಾಗೂ ನೂರಾರು ಜನರು ವಾಘ ಗಡಿಗೆ ತಲುಪಿದ್ದಾರೆ.