ಹೊಸದಿಲ್ಲಿ: ಪಾಕಿಸ್ತಾನದ ಕಸ್ಟಡಿಯಲ್ಲಿದ್ದ ವಾಯು ಸೇನೆ ಕಮಾಂಡರ್ ಅಭಿನಂದ್ ವರ್ಧಮಾನ್‍ರನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿದೆ. ರೆಡ್ ಕ್ರೆಸೆಂಟ್‍ನ ವೈದ್ಯಕೀಯ ಪರಿಶೀಲನೆ ಸಹಿತ ಹಲವು ಕ್ರಮಗಳು ಮತ್ತು ಶಿಷ್ಟಾಚಾರದ ಬಳಿಕ ನಮ್ಮ ವೀರ ಯೋಧನನ್ನು ಪಾಕಿಸ್ತಾನ ಹಸ್ತಾಂತರಿಸಿತು. ಏರ್ ವೈಸ್ ಮಾರ್ಸಲ್ ಆರ್‍ಜಿಕೆ ಕಪೂರ್, ಶ್ರೀಕುಮಾರ್ ಪ್ರಭಾಕರನ್ ಅಭಿನಂದನ್‍ರನ್ನು ಸ್ವಾಗತಿಸಿದರು.
ಅಭಿನಂದನ್‍ರಿಗೆ ವಿಶೇಷ ವಿಮಾನವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುವುದು ಎಂದು ಭಾರತ ತಿಳಿಸಿದ್ದರೂ ಕಿಡಿಗೇಡಿ ಪಾಕಿಸ್ತಾನ ಇದನ್ನು ಒಪ್ಪಿಕೊಂಡಿಲ್ಲ. ಭಾರೀ ಸುರಕ್ಷೆಯಲ್ಲಿ ಅಭಿನಂದನ್ ಭಾರತಕ್ಕೆ ಹಸ್ತಾಂತರಿಸಲು ಕರೆತರಲಾಗಿದೆ. ಭಾರತದ ಧೂತವಾಸದ ಅಧಿಕಾರಿಗಳು ಅಭಿನಂದನ್‍ರ ಜೊತೆ ಇದ್ದರು. ಗಡಿಯಿಂದ ಅಭಿನಂದನ್‍ರನ್ನು ಅಮೃತಸರಕ್ಕೆ ಕರೆದುಕೊಂಡು ಹೋಗಲಾಗುವುದು. ನಂತರ ವಿಶೇಷ ವಿಮಾನದಲ್ಲಿ ಅವರನ್ನು ದಿಲ್ಲಿಗೆ ಕರೆದು ಕೊಂಡು ಬರಲಾಗುತ್ತದೆ. ಇಲ್ಲಿಂದ ಭಾರತದ ಏರ್‍ಪೋರ್ಸ್ ಇಂಟಲಿಜೆನ್ಸ್ ಯುನಿಟ್‍ಗೆ ಕರೆದು ಕೊಂಡು ಹೋಗಲಾಗುತ್ತದೆ.
ಇದೇವೇಳೆ ಜಮ್ಮು ಕಾಶ್ಮೀರದ ನೌಶೇರದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದು ನಂತರ ಭಾರತದ ಸೈನ್ಯ ಪ್ರತಿದಾಳಿ ನಡೆಸಿದೆ. ಬುಧವಾರ ಪಾಕ್ ದಾಳಿಯನ್ನು ಹಿಮ್ಮೆಟ್ಟಿಸುವ ವೇಳೆ ವಿಂಗ್ ಕಮಾಂಡರ್ ವರ್ಧಮಾನ್ ಸಹಿತ ಮಿಗ್ 21 ವಿಮಾನ ದುರದೃಷ್ಟವಶಾತ್ ಪತನಗೊಂಡಿತ್ತು.












