ಸನ್ಮಾರ್ಗ ವಾರ್ತೆ
ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಎನ್ಸಿಪಿ ನಾಯಕ ಅನಿಲ್ ದೇಶ್ಮುಖ್ರಿಗೆ ಮುಂಬಯಿ ಹೈಕೋರ್ಟು ಜಾಮೀನು ನೀಡಿದೆ. ಭ್ರಷ್ಟಾಚಾರ, ಅಧಿಕಾರ ದುರ್ವಿನಿಯೋಗ ಪ್ರಕರಣದಲ್ಲಿ ಇವರು ಜೈಲು ಪಾಲಾಗಿದ್ದರು. ಗೃಹ ಸಚಿವರಾಗಿದ್ದ ಕಾಲದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ವಿವಿಧ ಬಾರ್ಗಳಿಂದ ₹ 4.70 ಕೋಟಿ ಅನಧಿಕೃತವಾಗಿ ಸಂಪಾದಿಸಿದ್ದಾರೆ ಎಂದು ಇಡಿ ಆರೋಪಿಸಿತ್ತು. ಮುಂಬಯಿ ಪೊಲೀಸಧಿಕಾರಿ ಸಚಿನ್ ವಾಸೆಯವರ ಮೂಲಕ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದಾರೆಂದು ಅವರ ವಿರುದ್ಧ ಆರೋಪ ಹೊರಿಸಲಾಗಿತ್ತು. ತದನಂತರ ವಾಸೆಯವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.
ನವೆಂಬರ್ 18ರಂದು ವಿಶೇಷ ಕೋರ್ಟು ವಾಸೆ’ಗೆ ಜಾಮೀನು ನೀಡಿತ್ತು. ಆದರೆ ಮುಖೇಶ್ ಅಂಬಾನಿ ಮನೆಯ ಬಳಿ ಬಾಂಬ್ ಪತ್ತೆ ಪ್ರಕರಣದ ಕಾರಣದಿಂದಾಗಿ ಸಚಿನ್ ವಾಸೆಗೆ ಜೈಲಿನಿಂದ ಹೊರಬರಲು ಸಾಧ್ಯವಾಗಿಲ್ಲ. ಜೈಲಿನಲ್ಲಿದ್ದ ಸಮಯದಲ್ಲಿ ಅನಿಲ್ ದೇಶ್ಮುಖ್ರನ್ನು ಭೇಟಿಯಾಗಿದ್ದೆ. ಅವರ ಆರೋಗ್ಯ ಸರಿಯಿಲ್ಲ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ವಿಭಾಗದ ನಾಯಕ ಸಂಜಯ್ ರಾವತ್ ಹೇಳಿದ್ದರು.
ಎನ್ಸಿಪಿ ನಾಯನ ವಿರುದ್ಧ ಮುಂಬೈ ಪೊಲೀಸ್ ಕಮಿಷನರ್ ಪರಂಬೀರ್ ಸಿಂಗ್ ಭ್ರಷ್ಟಾಚಾರ ಆರೋಪ ಹೊರಿಸಿದ್ದು, ಇದರ ತನಿಖೆಯನ್ನು ಸಿಬಿಐ ಎತ್ತಿಕೊಂಡಿದೆ. ಏಪ್ರಿಲ್ 5ರಂದು ಹೈಕೋರ್ಟ್ ನೀಡಿದ ಆದೇಶದ ಆಧಾರದ ಮೇಲೆ ಸಿಬಿಐ ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿತ್ತು. ಏಪ್ರಿಲ್ 21ರಂದು ಎಫ್ಐಆರ್ ಕೂಡ ದಾಖಲಾಗಿತ್ತು. ಆದರೆ ದೇಶಮುಖ್ ಆರೋಪವನ್ನು ಅಲ್ಲಗಳೆದಿದ್ದಾರೆ.












