ಸನ್ಮಾರ್ಗ ವಾರ್ತೆ
ಗೊಂಡಾ: ಮದುವೆ ಸಮಾರಂಭದಲ್ಲಿ ಆಹಾರ ಮುಟ್ಟಿದ ಕಾರಣಕ್ಕೆ 18 ವರ್ಷದ ದಲಿತ ಯುವಕನೊಬ್ಬನಿಗೆ ಅಮಾನುಷವಾಗಿ ಥಳಿಸಿದ ಘಟನೆಯು ಉತ್ತರ ಪ್ರದೇಶದ ವಜೀರ್ಗಂಜ್ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಎಸ್ಸಿ/ಎಸ್ಟಿ(ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ತನ್ನ ಸಹೋದರ ಲಲ್ಲ(18) ಗ್ರಾಮದ ಒಂದು ಮದುವೆಗೆ ಹೋಗಿದ್ದ. ಸಂದೀಪ್ ಪಾಂಡೆ ಎಂಬಾತನ ಮನೆಯಲ್ಲಿ ಲಲ್ಲನಿಗೆ ಥಳಿಸಲಾಗಿದೆ” ಎಂದು ಲಲ್ಲನ ಸಹೋದರ ನೌಬಸ್ತ್ ಗ್ರಾಮದ ನಿವಾಸಿ ರೇಣು ದೂರಿನಲ್ಲಿ ತಿಳಿಸಿದ್ದಾರೆ.
ಲಲ್ಲಾ ತಿನ್ನಲು ತಟ್ಟೆ ತೆಗೆದುಕೊಂಡ ತಕ್ಷಣ ಸಂದೀಪ್ ಮತ್ತು ಆತನ ಸಹೋದರರು ನಿಂದಿಸಿ ಥಳಿಸಲು ಆರಂಭಿಸಿದರು. ಲಲ್ಲಾನನ್ನು ರಕ್ಷಿಸಲು ಮುಂದಾದ ಆತನ ಅಣ್ಣ ಸತ್ಯಪಾಲ್ರಿಗೂ ಕ್ರೂರವಾಗಿ ಥಳಿಸಿದ್ದಾರೆ. ಹಾಗೂ ದ್ವಿಚಕ್ರವಾಹನಕ್ಕೆ ಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಗೊಂಡಾ ಎಎಸ್ಪಿ ಶಿವರಾಜ್ ತಿಳಿಸಿದ್ದಾರೆ.












