ಅಭಿನಂದನ್ ಎಂಬ ಪದಕ್ಕೆ ಇನ್ನು ಹೊಸ ಅರ್ಥ- ಮೋದಿ

0
760

ಹೊಸದಿಲ್ಲಿ,ಫೆ. 2: ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಮರಳಿದ ಬಳಿಕ ಪ್ರಧಾನಿ ಮೋದಿ ಹೆಚ್ಚಿನ ಪ್ರತಿಕ್ರಿಯೆ ನೀಡಿದ್ದಾರೆ. ಅಭಿನಂದನ್‍ರನ್ನು ಮರಳಿ ಕರೆತರಲು ಸಾಧ್ಯವಾಗಿದ್ದು ಭಾರತದ ರಾಜತಾಂತ್ರಿಕ ಗೆಲುವು ಎಂದು ಮೋದಿ ಹೇಳಿದರು. ಈ ವಿಷಯದಲ್ಲಿ ಭಾರತದ ಪ್ರತಿಯೊಂದು ಕ್ರಮವನ್ನು ವಿಶ್ವ ಕುತೂಹಲದಿಂದ ನೋಡಿದೆ ಎಂದು ಮೋದಿ ಹೇಳಿದರು.

ಕಳೆದ ಕೆಲವು ದಿವಸಗಳಿಂದ ನಡೆದ ಘಟನೆಗಳ ನಂತರ ಅಭಿನಂದನ್ ಎಂಬ ಸಂಸ್ಕøತ ಪದಕ್ಕೆ ಹೊಸ ಅರ್ಥ ಬಂದಿದೆ ಎಂದು ಮೋದಿ ಹೇಳಿದರು. ಅಭಿನಂದಿಸಲು ಬಳಸುವ ಪದ ಆದರೆ ಅದಕ್ಕೆ ಹೊಸ ಅರ್ಥ ಸೃಷ್ಟಿಯಾಗಬಹುದು ಎಂದರು.

ಪಾಕಿಸ್ತಾನದ ಸೇನೆಯ ವಶದಲ್ಲಿದ್ದ ಭಾರತದ ವಾಯುಸೇನೆಯ ವಿಂಗ್ ಕಮಾಂಡರ್‍ರನ್ನು ಕಳೆದ ದಿವಸ ಭಾರತಕ್ಕೆ ಕರೆತರಲಾಗಿದೆ. ಭಾರತದ ಗಡಿ ದಾಟಿದ ಪಾಕಿಸ್ತಾನದ ಎಫ್ 16 ವಿಮಾನವನ್ನು ಹೊಡೆದುರುಳಿಸಲು ಯತ್ನಿಸಿದ ವೇಳೆ ಅಭಿನಂದನ್ ಪಾಕಿಸ್ತಾನದ ವಶವಾಗಿದ್ದರು.