ಚಹಾಕ್ಕೆ ಸಕ್ಕರೆ ಕಡಿಮೆ: ತರ್ಕದ ನಡುವೆ ಮಾಲಿಕನಿಗೆ ಚೂರಿಯಿಂದ ಇರಿದ ಗ್ರಾಹಕ

0
438

ಸನ್ಮಾರ್ಗ ವಾರ್ತೆ

ಇವತ್ತಿನ ದಿನಗಳಲ್ಲಿ ಘರ್ಷಣೆ ಹಲ್ಲೆ ಹತ್ಯೆ ಇತ್ಯಾದಿಗಳಿಗೆ ನಿರ್ದಿಷ್ಟ ಕಾರಣ ಬೇಕಿಲ್ಲ. ಕೇವಲ ಚಹಾಕ್ಕೆ ತುಸು ಸಕ್ಕರೆ ಕಡಿಮೆಯಾದರೂ ಅದು ಹಲ್ಲೆಗೆ ಮತ್ತು ಹತ್ಯಾ ಯತ್ನಕ್ಕೆ ಕಾರಣವಾಗಬಲ್ಲದು. ಇಂತದ್ದೊಂದು ಘಟನೆ ಕೇರಳದಲ್ಲಿ ನಡೆದಿದೆ. ಚಹಾಕ್ಕೆ ಹಾಕಿದ ಸಕ್ಕರೆ ಕಡಿಮೆಯಾಯಿತು ಎಂದು ಹೇಳಿ ವ್ಯಕ್ತಿಯೋರ್ವರಿಗೆ ಚೂರಿ ಹಾಕಲಾದ ಘಟನೆ ನಡೆದಿದೆ.

ಘಟನೆಯು ಮಲಪುರಂ ಜಿಲ್ಲೆಯ ತಾನೂರು ಎಂಬಲ್ಲಿಯ ಚಹಾ ಅಂಗಡಿಯಲ್ಲಿ ನಡೆದಿದ್ದು ಅಂಗಡಿಯ ಮಾಲಕ ಮನಾಫಿನ್ ಎಂಬವರಿಗೆ ತೀವ್ರ ಇರಿತದ ಗಾಯವಾಗಿದೆ. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಚಹಾ ಕುಡಿಯಲು ಬಂದ ಗ್ರಾಹಕ ರೋರ್ವರು ಚಹಾಕ್ಕೆ ಸಕ್ಕರೆ ಕಡಿಮೆಯಾಗಿದೆ ಎಂದು ಮಾಲಕನಲ್ಲಿ ಹೇಳಿದರು. ಆದರೆ ಆ ಬಳಿಕ ಅವರ ನಡುವೆ ತರ್ಕ ಪ್ರಾರಂಭವಾಯಿತು. ಕೊನೆಗೆ ಗ್ರಾಹಕ ಮಾಲಕನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಆ ಬಳಿಕ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.