ಸನ್ಮಾರ್ಗ ವಾರ್ತೆ
ಬೆಂಗಳೂರು: ಬೆಂಗಳೂರಿನಲ್ಲಿ ಬೈಬಲ್ ಹಂಚುತ್ತಿದ್ದ ಕ್ರೈಸ್ತ ಮಿಷನರಿ ತಂಡದ ಮೇಲೆ ಗುಂಪು ಹಲ್ಲೆ ನಡೆಸಿದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಡಿಸೆಂಬರ್ 23ರಂದು ಕ್ರಿಸ್ಮಸ್ ನಿಮಿತ್ತ ಮಲ್ಲೇಶ್ವರಂನಲ್ಲಿ ಬೈಬಲ್ ಮತ್ತು ಚಾಕಲೇಟ್ ವಿತರಣೆ ವೇಳೆ ದಾಳಿ ನಡೆದಿತ್ತು.
ಬೈಬಲ್ ವಿತರಿಸುವುದನ್ನು ವಿರೋಧಿಸಿ ಒಬ್ಬರು ಮಹಿಳೆ ಮೊದಲು ಗಲಾಟೆ ಮಾಡಿದರು. ನಂತರ ಅಲ್ಲಿಗೆ ಬಂದ ಜನರ ಗುಂಪು ಕಾರಿನಲ್ಲಿದ್ದ ಬೈಬಲ್ಗಳನ್ನು ಹೊರೆಗೆಸೆದು ಹಲ್ಲೆ ನಡೆಸಿದೆ.
ನಮ್ಮ ಪ್ರದೇಶದಲ್ಲಿ ಬೈಬಲ್ ವಿತರಿಸಲು ನಿಮಗೆಷ್ಟು ಧೈರ್ಯ? ಎಂದು ಜನರ ಗುಂಪಿನಲ್ಲಿದ್ದವರು ಕ್ರೈಸ್ತ ಮಿಷನರಿಗಳಿಗೆ ಧಮ್ಕಿ ಹಾಕಿದ್ದಾರೆ. ನಿಮ್ಮ ಬಳಿ ಬೈಬಲ್ ಇದ್ದರೆ ನಿಮ್ಮ ಬಳಿಯೇ ಇಟ್ಕೊಳ್ಳಿ. ನಾವು ನಿಮಗೆ ಭಗವದ್ಗೀತೆ ಕೊಡಲು ಬರುತ್ತೇವಾ? ಎಂದು ಜನರ ಗುಂಪು ಪ್ರಶ್ನಿಸಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
“ನಾವು ಯಾರಿಗೂ ಒತ್ತಾಯದಿಂದ ಬೈಬಲ್ ಅನ್ನು ನೀಡಿಲ್ಲ” ಎಂದು ಮಿಷನರಿಗಳ ತಂಡ ತಿಳಿಸಿದೆ. ಘಟನೆಯನ್ನು ಅಖಿಲ ಭಾರತ್ ಕ್ರೈಸ್ತ ಮಹಾ ಸಭೆ ಖಂಡಿಸಿದೆ. ಕರ್ನಾಟಕದಲ್ಲಿ ಶಾಂತ ರೀತಿಯಿಂದ ಕ್ರಿಸ್ಮಸ್ ಆಚರಿಸಲು ಪೊಲೀಸರ ಸಂರಕ್ಷಣೆ ಕೊಡಬೇಕು ಎಂದು ಅಖಿಲ ಭಾರತ್ ಕ್ರೈಸ್ತ ಮಹಾ ಸಭೆಯ ಆಗ್ರಹಿಸಿದೆ.
Christian missionaries who were distributing the Bible in #Bengaluru were assaulted by a mob, & the incident was caught on camera.
According to members of the small group, the incident occurred on Dec 23, as they were distributing #Bibles & #Chocolates in the #Malleswaram area. pic.twitter.com/leQAf3wCCG
— Hate Detector 🔍 (@HateDetectors) January 4, 2023












