ಬಾಬರಿ ಪ್ರಕರಣ: ಸುಪ್ರೀಂಕೋರ್ಟ್ ನೇಮಿಸಿದ ಮಧ್ಯಸ್ಥಿಕೆದಾರರು

0
1837

ಹೊಸದಿಲ್ಲಿ: ಬಾಬರಿ ಮಸೀದಿ ಜಮೀನು ವಿವಾದ ಪರಿಹಾರಕ್ಕೆ ಪ್ರಮುಖರನ್ನು ಮಧ್ಯಸ್ಥಿಕೆದಾರರನ್ನಾಗಿ ಸುಪ್ರೀಂ ಕೋರ್ಟ್ ನಿಯೋಜಿಸಿದೆ. ಮಾಜಿ ಸುಪ್ರೀಂಕೋರ್ಟ್ ನ್ಯಾಯಾಧೀಶ ಎಫ್‌.ಎಂಐ ಖಲೀಫುಲ್ಲ ಸಮಿತಿಯ ಅಧ್ಯಕ್ಷರಾಗಿದ್ದು, ಶ್ರೀಶ್ರೀ ರವಿಶಂಕರ್, ಹಿರಿಯ ವಕೀಲ ಶ್ರೀರಾಂ ಪಿಂಚು ಸದಸ್ಯರಾಗಿರುತ್ತಾರೆ ಎಂದು ಚೀಫ್ ಜಸ್ಟಿಸ್ ರಂಜನ್ ಗೊಗೊಯ್ ಅಧ್ಯಕ್ಷತೆಯ ಐವರು ಸಮಿತಿಯ ಸಂವಿಧಾನ ಪೀಠ ತಿಳಿಸಿದೆ.

ಜಸ್ಟಿಸ್ ಎಫ್‍ಎಂ ಐ ಖಲೀಫುಲ್ಲ:
ಇವರು 2016ರಲ್ಲಿ ಸುಪ್ರೀಂಕೋರ್ಟಿನ ನ್ಯಾಯಾಧೀಶ ಸ್ಥಾನದಿಂದ ನಿವೃತ್ತರಾದರು. ಸುಪ್ರೀಂಕೋರ್ಟು ಜಡ್ಜ್ ಆಗುವ ಮೊದಲು ಜಮ್ಮು ಕಾಶ್ಮೀರದ ಹೈಕೋರ್ಟಿನ ಚೀಫ್ ಜಸ್ಟಿಸ್ ಆಗಿದ್ದರು. ಈ ಸಮಯದಲ್ಲಿ ಅಲ್ಲಿ ಲೀಗಲ್ ಎಯ್ಡ್ ಕ್ಲಿನಿಕ್‍ಗಳನ್ನು ಸ್ಥಾಪಿಸಲಾಗಿತ್ತು. ಜಸ್ಟಿಸ್ ಎಂ.ಫಕೀರ್ ಮುಹಮ್ಮದ್‍ರ ಪುತ್ರನಾಗಿ ತಮಿಳುನಾಡಿನ ಶಿವಗಂಗದಲ್ಲಿ ಜನಿಸಿದರು. 1975ರಲ್ಲಿ ವಕೀಲಿ ವೃತ್ತಿ ಆರಂಭಿಸಿದರು. 2000ದ್ಲಿ ಮದ್ರಾಸ್ ಹೈಕೋರ್ಟ್ ಜಡ್ಜ್ ಆಗಿ ಸೇವೆಗೆ ಸೇರಿದರು.

ಹಿರಿಯ ವಕೀಲ ಶ್ರೀರಾಂ ಪಿಂಚು:
ಹಿರಿಯ ವಕೀಲರಾದ ಪಿಂಚು 2015ರಲ್ಲಿ ಮದ್ರಾಸ್ ಹೈಕೋರ್ಟಿನಲ್ಲಿ ತಮಿಳು ಮಿಡಿಯೇಶನ್ ಆಂಡ್ ಕನ್ಸಲಿಯೇಶನ್ ಸೆಂಟರ್ ಆರಂಭಿಸಿದರು. ದೇಶದ ಮೊದಲ ಮೀಡಿಯೇಶನ್ ಸೆಂಟರ್ ಇದು. ಮಧ್ಯಸ್ಥಿಕೆ ಮತ್ತು ನಿರ್ಣಯಕ್ಕೆ ಪ್ರತ್ಯೇಕ ಛೇಂಬರ್‍ಗಳನ್ನು ಇವರು ಸ್ಥಾಪಿಸಿದ್ದರು. ಬಳಕೆದಾರ ಸಂರಕ್ಷಣೆ ಕಾನೂನು ಬರುವ ಮೊದಲು ದೇಶದಲ್ಲಿ ಬಳಕೆದಾರ ವ್ಯವಹಾರಗಳಲ್ಲಿ ಪರಿಣತ ವಕೀಲರಲ್ಲಿ ಇವರೂ ಒಬ್ಬರು. ಅಸ್ಸಾಂ, ನಾಗಲೆಂಡ್ ಜಮೀನು ವಿವಾದ ಪ್ರಕರಣದಲ್ಲಿ ಮಧ್ಯಸ್ಥಿಕೆಗೆ ಇವರನ್ನು ಸುಪ್ರೀಂಕೋರ್ಟು ಈ ಹಿಂದೆ ನೇಮಕಗೊಳಿಸಿತ್ತು. ಮುಂಬೈಯ ಪಾಸಿಶ್ ಸಮುದಾಯದ ವ್ಯವಹಾರದಲ್ಲಿಯೂ ಅವರು ಮಧ್ಯಸ್ಥಿಕೆ ವಹಿಸಿದ್ದರು.

ಶ್ರೀ ಶ್ರೀ ರವಿಶಂಕರ್
ಜೀವನಕಲೆಯ ಸ್ಥಾಪಕರು,ಶ್ರೀಲಂಕಾ, ಹೈಟಿ, ಇರಾಕ್,ಸಿರಿಯಗಳಲ್ಲಿ ಇವರ ಆರ್ಟ್ ಆಫ್ ಲಿವಿಂಗ್ ಸಂತ್ರಸ್ತರ ಪರಿಹಾರ ವಿಷಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ಹಿಂದೆ ಬಾಬರಿ ವಿವಾದ ಪರಿಹಾರಕ್ಕೆ ಶ್ರೀಶ್ರೀ ರವಿಶಂಕರ್ ಮಧ್ಯಸ್ಥಿಕೆ ವಹಿಸಲು ಶ್ರಮಿಸಿದ್ದರು. ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಬಂದಿದೆ. ತಮಿಳುನಾಡಿನಲ್ಲಿ ಹುಟ್ಟಿದ ಅವರು ಬೆಂಗಳೂರಿನಲ್ಲಿ ವಾಸವಿದ್ದಾರೆ.