ಸನ್ಮಾರ್ಗ ವಾರ್ತೆ
ಉಳ್ಳಾಲ ಬೀಚ್ ಗೆ ಪ್ರತೀ ದಿನ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಊರಿನ ಪ್ರವಾಸಿಗರು, ಸಾರ್ವಜನಿಕರು ಸಮುದ್ರ ವೀಕ್ಷಣೆಗೆ ಆಗಮಿಸುತ್ತಿದ್ದು ಪ್ರವಾಸಿಗರಿಗೆ ಸಮುದ್ರದ ಆಳ, ನೀರಿನ ಸೆಳೆತದ ಬಗ್ಗೆ ಮಾಹಿತಿ ಇಲ್ಲದ ಕಾರಣ ಪ್ರವಾಸಿಗರು, ಸಾರ್ವಜನಿಕರು ನೀರಿಗೆ ಇಳಿಯುವುದರಿಂದ ಈಗಾಗಲೇ ಹಲವು ಜೀವಹಾನಿ ಉಂಟಾಗಿರುತ್ತದೆ.
ಆದ್ದರಿಂದ ಬೀಚ್ ಗೆ ಬರುವ ಪ್ರವಾಸಿಗರು, ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಪ್ರತಿ ದಿನವೂ ಬಂದೋಬಸ್ತ್ ಕರ್ತವ್ಯಕ್ಕೆ ಗೃಹ ರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಬೇಕಾಗಿ ಹಾಗೂ ಸಮುದ್ರ ಕಿನಾರೆಯಲ್ಲಿ ಇರುವ ಅಪಾಯದ ಬಗ್ಗೆ ಎಚ್ಚರಿಕೆಯ ಫಲಕವನ್ನು ಅಳವಡಿಸಿ ಸಹಕರಿಸುವಂತೆ ಉಳ್ಳಾಲ ಪೊಲೀಸ್ ಇಲಾಖೆಗೆ ಉಳ್ಳಾಲದ ಸೋಷಿಯಲ್ ಫ್ರೆಂಡ್ಸ್ ಕ್ಲಬ್ ಕೋಡಿ ಹಾಗೂ ಯೂತ್ ಸ್ಪೋರ್ಟ್ಸ್ ಅಕಾಡೆಮಿ ಮಾಸ್ತಿಕಟ್ಟೆ ಜಂಟಿಯಾಗಿ ಉಳ್ಳಾಲ ಇನ್ಸ್‌ಪೆಕ್ಟರ್ ಸಂದೀಪ್ ರವರಿಗೆ ಮನವಿ ನೀಡಲಾಯಿತು.
ಮನವಿಯನ್ನು ಸ್ವೀಕರಿಸಿದ ಇನ್ಸ್‌ಪೆಕ್ಟರ್ ಸಂದೀಪ್ ತಕ್ಷಣ ಸ್ಪಂದಿಸುವ ಭರವಸೆ ನೀಡಿದರು.
ನಿಯೋಗದಲ್ಲಿ ಯೂತ್ ಸ್ಪೋರ್ಟ್ಸ್ ಅಕಾಡೆಮಿ ಉಳ್ಳಾಲ ಇದರ ಅಧ್ಯಕ್ಷರಾದ ಸಾಜಿದ್ ಉಳ್ಳಾಲ್ ಹಾಗೂ ಸೋಶಿಯಲ್ ಫ್ರೆಂಡ್ಸ್ ಕ್ಲಬ್ ಕೋಡಿ ಇದರ ಅಧ್ಯಕ್ಷರಾದ ಶಿಹಾಬ್ ಕೋಡಿ ರವರು ಉಪಸ್ಥಿತರಿದ್ದರು.












