ಪರೀಕ್ಷೆ ಬರೆದು ಮರಳುತ್ತಿದ್ದ ಹನ್ನೆರಡರ ಹುಡುಗಿಯನ್ನು ಅತ್ಯಾಚಾರ ಮಾಡಿ ಹತ್ಯೆಗೈದರು: ಆರೋಪಿಗಳ ಪಟ್ಟಿ ನೋಡಿದರೆ ದಂಗಾಗುವಿರಿ

0
5483

ಭೋಪಾಲ್, ಮಾ.19: ಮಧ್ಯಪ್ರದೇಶದ ಸಾಗರ ಎಂಬಲ್ಲಿ ಹನ್ನೆರಡು ವರ್ಷದ ಕಂದಮ್ಮನನ್ನು ಸಹೋದರರು ಮತ್ತು ಮಾವ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೆ ಕೊರಳು ಕತ್ತರಿಸಿ ಕೊಂದು ಹಾಕಿದ ದಾರುಣ ಘಟನೆ ನಡೆದಿದೆ. ಮಾರ್ಚ್ 14ರಂದು ಈ ಘಟನೆ ನಡೆದಿತ್ತು. ಶಾಲೆಯಿಂದ ಬಂದ ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀರ ತನಿಖೆಯ ವೇಳೆ ಗ್ರಾಮದ ಸಮೀಪದಲ್ಲಿ ತಲೆ ಕತ್ತರಿಸಿ ಹೂತು ಹಾಕಲಾದ ಮೃತದೇಹ ಪತ್ತೆಯಾಗಿತ್ತು. ಘಟನೆಯಲ್ಲಿ ಬಾಲಕಿಯ ಸಹೋದರ ಮತ್ತು ಮಾವ ಛೋಟಾ ಪಟೇಲ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಪೋಸ್ಟ್ ಮಾರ್ಟಂ ವರದಿಯಲ್ಲಿ ಬಾಲಕಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ತಿಳಿದು ಬಂದಿದೆ. ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ಬಾಲಕಿಯ ತಲೆ ಕತ್ತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಮಾವನೊಂದಿಗೆ ಜಮೀನು ವಿವಾದ ಇತ್ತು ಎಂದು ತಿಳಿದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯದ ಸುರಳಿ ಬಿಚ್ಚಿಕೊಂಡಿದೆ.

ಪರೀಕ್ಷೆ ಬರೆದು ಶಾಲೆಯಿಂದ ಬರುತ್ತಿದ್ದಾಗ ಬಾಲಕಿಯ ಸಹೋದರರೇ ಅವಳನ್ನು ಛೋಟಾ ಪಟೇಲನ ಮನೆಗೆ ಕರೆತಂದು ಅತ್ಯಾಚಾರ ಮಾಡಿದ್ದರು. ಅತ್ಯಾಚಾರ ಮಾಡಿದ್ದು ಪೊಲೀಸರಿಗೆ ತಿಳಿಸುವೆ ಎಂದಾಗ ಛೋಟಾ ಪಟೇಲ್‍ನ ಪತ್ನಿ ಬಾಲಕಿಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ನಂತರ ಕತ್ತಿಯಿಂದ ಬಾಲಕಿಯ ತಲೆ ಕತ್ತರಿಸಿ ಹೂತು ಹಾಕಿದೆವೆಂದು ಛೋಟಾ ಪಟೇಲ್ ಪೊಲೀಸರಿಗೆ ತಿಳಿಸಿದ್ದಾನೆ.

ಈತನ ಮನೆಯಲ್ಲಿ ಬಾಲಕಿಯ ರಕ್ತ ಸಿಕ್ತ ಬಟ್ಟೆಗಳು ಮತ್ತು ಕೊಲೆಗೆ ಬಳಸಿದ ಕತ್ತಿಯನ್ನು ಪತ್ತೆ ಹಚ್ಚಲಾಗಿದೆ. ಘಟನೆಯಲ್ಲಿ ಭಾಗಿಯಾದ ಬಾಲಕಿಯ ಇನ್ನೊಬ್ಬ ಸಹೋದರ ತಪ್ಪಿಸಿಕೊಂಡಿದ್ದಾನೆ. ಈತನನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸಧಿಕಾರಿ ಅಮಿತ್ ಸಾಂಘ್ವಿ ತಿಳಿಸಿದರು.