ಸನ್ಮಾರ್ಗ ವಾರ್ತೆ
ಮೀರತ್: ಭೀಮ್ ಆರ್ಮಿ ನಾಯಕ ಚಂದ್ರಶೇಖ್ ಆಝಾದ್ ಕೊಲೆ ಬೆದರಿಕೆ ಹಾಕಿದ ದುಷ್ಕರ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅವನು ಈ ಸಲ ಬದುಕಿ ಉಳಿದ ಮುಂದಿನ ಸಲ ಹಾಗೆ ಆಗುವುದಿಲ್ಲ ಎಂದು ಚಂದ್ರಶೇಖರ್ ಅಪಾಯದಿಂದ ಪಾರಾದ ಬಳಿಕ ಈತ ಪೋಸ್ಟ್ ಅನ್ನು ಫೇಸ್ಬುಕ್ನಲ್ಲಿ ಹಾಕಿದ್ದ. ಕ್ಷತ್ರೀಯ ಆಫ್ ಅಮೇಠಿ ಎಂಬ ಫೇಸ್ಬುಕ್ ಪುಟದಲ್ಲಿ ಚಂದ್ರಶೇಖರ್ ಆಝಾದ್ ವಿರುದ್ಧ ಬೆದರಿಕೆ ಬಂದಿತ್ತು. ಕೊಲೆಯತ್ನ ನಡೆದ ಬಳಿಕವೂ ಯುವಕ ಆಝಾದ್ ಬದುಕುಳಿದ ಬಗ್ಗೆ ಪೋಸ್ಟ್ ಹಾಕಿದ್ದಾನೆ. ಬಂಧಿತ ವ್ಯಕ್ತಿ ವ್ಯಾನ್ ಚಾಲಕನಾಗಿದ್ದು ಅವನ ಹೆಸರು ವಿಮ್ಲೇಶ್ ಸಿಂಗ್ ಎಂದಾಗಿದೆ.
ಚಂದ್ರಶೇಕರ್ ರನ್ನು ಅಮೇಠಿಯ ಠಾಕೂರ್ ಗಳು ಕೊಲೆ ಮಾಡುತ್ತಾರೆ. ಈ ಕೃತ್ಯ ಅವರಿಗೆ ಮಾತ್ರ ಸಾಧ್ಯ ಎಂದು ಬರೆದಿದ್ದ. ಈತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು. ಹಾಡಹಗಲು ಚಂದ್ರಶೇಖರ್ ಕೊಲ್ಲಲ್ಪಡುತ್ತಾನೆ. ಇವನ ಪೋಸ್ಟ್ ನಿಂದ ಪೊಲೀಸರಿಗೆ ಕೊಲೆ ಯತ್ನ ಭೇದಿಸುವಲ್ಲಿ ಸುಲಭವಾಗಿತ್ತು.
ಮೂವತ್ತು ವರ್ಷ ವಯಸ್ಸಿನ ಯುವಕ ವಿಮ್ಲೇಶ್ ಸಿಂಗ್ ಪೋಸ್ಟ್ ಹಾಕಿದ ವ್ಯಕ್ತಿಯಾದರೂ ಚಂದ್ರ ಶೇಖರ್ ಕೊಲೆ ಯತ್ನದಲ್ಲಿ ಈತ ಶಾಮೀಲಾಗಿರಬಹುದೇ ಎಂದು ಪೊಲೀಸರ ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿಯಲ್ಲಿ ದುಷ್ಕರ್ಮಿಗಳ ಕಾರಿನ ದೃಶ್ಯ ಕಂಡು ಬಂದಿದ್ದು ನಾಲ್ವರು ಕಾರಿನಲ್ಲಿದ್ದುದು ಗೊತ್ತಾಗಿದೆ.












