ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಬಕ್ರೀದ್ ಸಂದೇಶ ಕಾರ್ಯಕ್ರಮ

0
380

ಸನ್ಮಾರ್ಗ ವಾರ್ತೆ

ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಬಕ್ರೀದ್ ಸಂದೇಶ ಕಾರ್ಯಕ್ರಮ ದಿನಾಂಕ 27.06.2023 ರಂದು ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಬಕ್ರೀದ್ ಸಂದೇಶ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ದಾರುಲ್ ಹಿಕ್ಮಾ ಸಂಸ್ಥೆ ಮಂಗಳೂರು ಇದರ ಪ್ರಾಂಶುಪಾಲರಾದ ಶ್ರೀಮತಿ ಸುಮಯ್ಯ ಹಮೀದುಲ್ಲಾ ಇವರು ಬಕ್ರೀದ್ ಎಂದರೆ ತ್ಯಾಗ ಮತ್ತು ಬಲಿದಾನದ ಹಬ್ಬವಾಗಿದೆ. ಇಬ್ರಾಹಿಂ (ಅ) ರ ಜೀವನ ನಮಗೆ ಮಾದರಿಯಾಗಿದೆ ಮತ್ತು ಅದನ್ನು ನಮ್ಮ ಜೀವನದಲ್ಲಿ ಅನುಸರಿಸಬೇಕೆಂದು ಹೇಳಿದರು. ಹೆತ್ತವರನ್ನು ಪ್ರೀತಿಸಿ, ಗೌರವಿಸಿ ಮತ್ತು ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸುವ ಮೂಲಕ ಬಕ್ರೀದ್ ಸಂದೇಶವನ್ನು ಸಾರಿದರು.

ಅಂತಿಮ ಪದವಿ ವಿಭಾಗದ ವಿದ್ಯಾರ್ಥಿನಿಯರು ಸಮೂಹ ಗಾಯನದೊಂದಿಗೆ ಮನರಂಜಿಸಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಹೇಮಲತ ಬಿ ಡಿ ಹಾಗೂ ಕಾರ್ಯಕ್ರಮದಲ್ಲಿ ಸಲಹಾ ಮಂಡಳಿಯ ಕಾರ್ಯದರ್ಶಿ ಮಮಿತಾ ಎಸ್ ರೈ ಮತ್ತು ಇತರ ಸದಸ್ಯರು, ಬೋಧಕ ಬೋಧಕೇತರ ವೃಂದದವರು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಕುಮಾರಿ ನಸ್ರೀನಾ ಕಿರಾತ್ ಪಠಿಸಿ ಕುಮಾರಿ ಶಮಿಯಾ ಸ್ವಾಗತಿಸಿ, ಕುಮಾರಿ ಅಸ್ರೀನಾ ವಂದಿಸಿದರು. ಕುಮಾರಿ ಪಝೀಲಾ ಕಾರ್ಯಕ್ರಮವನ್ನು ನಿರೂಪಿಸಿದರು.