ನ್ಯೂಯಾರ್ಕ್,ಮಾ.20: ಮಹಿಳೆ ಪುರುಷ ಪ್ರಾಬಲ್ಯದ ವಿಜ್ಞಾನ ಕ್ಷೇತ್ರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದಾಳೆ. ಅಮೆರಿಕದ ಕರೆನ್ ಅಹ್ಲನ್ಬೆಕ್ ಗಣಿತದ ವಿಭಿನ್ನ ಸಮೀಕರಣ ವಿಭಾಗದ ತನ್ನ ಕೆಲಸಕ್ಕಾಗಿ ಗಣಿತಶಾಸ್ತ್ರದ 2019ರ ಅಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಜಿಯೊಮೆಟ್ರಿಕ್ ವಿಶ್ಲೇಷಣೆ ಮತ್ತು ಗ್ವಾಜ್ ಸಿದ್ಧಾಂತದಲ್ಲಿ ಮೂಲಭೂತ ಕೆಲಸ ಮಾಡಿದ್ದಕ್ಕಾಗಿ ಈಪ್ರಶಸ್ತಿ ಅವರಿಗೆ ಒಲಿದು ಬಂದಿದೆ. ಅವರು ನಾಟಕೀಯವಾಗಿ ಗಣಿತದಲ್ಲಿ ತಳಮಟ್ಟದ ಬದಲಾವಣೆ ತಂದಿದ್ದಾರೆಂದು ಅಬೆಲ್ ಕಮಿಟಿ ಅಧ್ಯಕ್ಷ ಹನ್ಸ್ ಮುಂತೆಕಾಸ್ ಹೇಳಿದರು.
ಅವರ ಸಿದ್ಧಾಂತಗಲು ತಳಮಟ್ಟದ ಗ್ರಹಿಕೆಯಲ್ಲಿ ಕ್ರಾಂತಿ ಸೃಷ್ಟಿಸಿದ್ದು ಅವರು ಸಾಬೂನು ಗುಳ್ಳೆಗಳಿಂದಾಗಿವೆ ಮತ್ತು ಹೆಚ್ಚಿನ ಆಯಾಮಗಳಲ್ಲಿ ಸಮಸ್ಯೆಗಳನ್ನು ಸರಳೀಕರಣಗೊಳಿಸಿದರು ಎಂದು ಮುಂತೆಕಾಸ್ ಹೇಳಿದರು. ಅಹ್ಲೆನ್ ಬೆಕ್ ಗಣಿತದ ಈ ವಿಭಾಗದಲ್ಲಿ ಅಬೆಲ್ ಪ್ರಶಸ್ತಿ ಪಡೆದ ಮೊತ್ತ ಮೊದಲ ಮಹಿಳೆಯಾಗಿದ್ದು ಅವರು ಆರು ಮಿಲಿಯನ್ ಕ್ರೋನರ್(703,000ಡಾಲರ್) ಬಹುಮಾನಕ್ಕೆ ಭಾಜನರಾಗಿದ್ದು ವಿಜ್ಞಾನ ಮತ್ತು ಗಣಿತ ಶಾಸ್ತ್ರದ ಲಿಂಗ ಸಮಾನತೆ ಸಿದ್ಧಾಂತದ ಮುಖ್ಯ ಪ್ರತಿಪಾದಕಿಯಾಗಿದ್ದಾರೆ.
ಎಪ್ಪತ್ತು ವರ್ಷದ ಅಹ್ಲನ್ಬೆಕ್ ಪ್ರಿನ್ಸಟನ್ ಯುನಿವರ್ಸಿಟಿಯ ಹಿರಿಯ ಸಂದರ್ಶಕ ವಿಜ್ಞಾನಿಯಾಗಿದ್ದು ಅವರು ಇನ್ಸಿಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡಿ(ಅಮೆರಿಕ) ಇಲ್ಲಿ ಸಂದರ್ಶಕ ಪ್ರಾಧ್ಯಾಪಕಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ವಿಜ್ಞಾನ ಕ್ಷೇತ್ರದಲ್ಲಿ ಪ್ರಶಸ್ತಿ ಗಳಿಸಿದ ಮಹಿಳೆಯರ ಸಣ್ಣ ಗುಂಪಿನ ಸದಸ್ಯೆಯಾಗಿ ಅಹ್ಲೆನ್ಬೆಕ್ ಇದೀಗ ಸೇರ್ಪಡೆಯಾಗಿದ್ದು ಈ ಪ್ರಶಸ್ತಿಯನ್ನು 19ನೆ ಶತಮಾನದ ನಾರ್ವೆಯ ಗಣಿತ ವಿಜ್ಞಾನಿ ನೀಲ್ ಹೆನ್ರಿಕ್ ಅಬೆಲ್ ಹೆಸರಿನಲ್ಲಿ ನೀಡಲಾಗುತ್ತಿದೆ.













